ತನ್ನ 14 ತಿಂಗಳ ಮಗುವನ್ನೇ ಹತ್ಯೆಗೈದ ತಂದೆ

Prasthutha|

ರಾಯಚೂರು: ತಂದೆಯೊಬ್ಬ 14 ತಿಂಗಳ ತನ್ನ ಹಸುಗೂಸನ್ನು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದಲ್ಲಿ ನಡೆದಿದೆ.

- Advertisement -

14 ತಿಂಗಳ ಅಭಿನವ್ ತಂದೆಯಿಂದಲೇ ಹತ್ಯೆಗೀಡಾದ ಮಗು. ತನ್ನ ಮಗುವನ್ನೇ ಕೊಂದು 3 ದಿನ ಕಲ್ಲಿನ ಅಡಿಯಲ್ಲಿ ಮುಚ್ಚಿಟ್ಟ ತಂದೆ ಮಹಾಂತೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಮದುವೆಯಾಗುವ ಆಸೆಯಿಂದ ಮಗುವನ್ನು ಕೊಂದು ಕಲ್ಲಿನ ಅಡಿಯಲ್ಲಿ 3 ದಿನ ಮುಚ್ಚಿಟ್ಟಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದ ಮಹಾಂತೇಶ್ ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದ. ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಕೊಲೆ ಮಾಡಿದ್ದಾನೆ.

- Advertisement -

ಅನುಮಾನದ ಮೇಲೆ ಪೊಲೀಸರು ಹಂತಕ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೊದಲು ಮಗುವನ್ನು ಸುಟ್ಟು ಹಾಕಿರುವುದಾಗಿ ಮಾಹಿತಿ ನೀಡಿದ್ದ. ಬಳಿಕ ಕಲ್ಲಿನ ಅಡಿ ಮುಚ್ಚಿಟ್ಟ ಮಗುವನ್ನು ತೋರಿಸಿದ್ದಾನೆ. ಘಟನೆ ಹಿನ್ನೆಲೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp