ಶ್ರೀಲಂಕಾ: ಭಾರಿ ಮಳೆಗೆ ಇಂದು ಒಂದೇ ದಿನ 6 ಮಂದಿ ಮೃತ

Prasthutha|

ಕೊಲಂಬೊ: ಶ್ರೀಲಂಕಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದು ಒಂದೇ ದಿನ ದೇಶದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

- Advertisement -

ಭಾರಿ ಮಳೆಯಿಂದಾಗಿ 1346 ಮನೆಗಳಿಗೆ ಹಾನಿಯಾಗಿದ್ದು, ದೇಶಾದ್ಯಂತ ಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆ ಮತ್ತು ಗಾಳಿಯಿಂದ ಮರಗಳು ಉರುಳಿಬಿದ್ದು, ನಾಲ್ಕು ಜಿಲ್ಲೆಗಳಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ.

- Advertisement -

34 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ’ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಅಲ್ಲದೆ ತೀವ್ರ ಈಶಾನ್ಯ ಮಾನ್ಸೂನ್‌ ಮಳೆಯ ಎಚ್ಚರಿಕೆ ನೀಡಿದೆ.

ರೈಲು ಹಳಿಗಳಲ್ಲಿ ಮರಗಳು ಬಿದ್ದಿರುವುದರಿಂದ ಶ್ರೀಲಂಕಾ ರೈಲ್ವೆ ಇಲಾಖೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Join Whatsapp