ಮನೆಯ ಹೊರಗೆ ಮಲಗಿದ್ದವರ ಮೇಲೆ ಲಾರಿ ಪಲ್ಟಿ: ಒಂದೇ ಕುಟುಂಬದ 8 ಮಂದಿ ಮೃತ್ಯು

Prasthutha|

ಹರ್ದೋಯಿ: ಮನೆಯ ಹೊರಗೆ ಮಲಗಿದ್ದವರ ಮೇಲೆ ಮರಳು ತುಂಬಿದ ಲಾರಿಯೊಂದು ಪಲ್ಟಿಯಾಗಿ ಒಂದೇ ಕುಟುಂಬದ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇದ ಹರ್ದೋಯಿಯಲ್ಲಿ ಇಂದು (ಬುಧವಾರ) ಮುಂಜಾನೆ ನಡೆದಿದೆ.

- Advertisement -

ಮೃತರನ್ನು ಅವಧೇಶ್ (40), ಅವರ ಪತ್ನಿ ಸುಧಾ (35) ಮತ್ತು ಅವರ ಮೂವರು ಮಕ್ಕಳಾದ ಲಲ್ಲಾ (5), ಸುನೈನಾ (11) ಮತ್ತು ಬುದ್ದು (4). ಸಂಬಂಧಿ ಕರಣ್ (35), ಅವರ ಪತ್ನಿ ಹೀರೋ (30) ಮತ್ತು ಇವರ ಮಗಳು ಕೋಮಲ್ (5) ಎಂದು ಗುರುತಿಸಲಾಗಿದೆ.

ಈ ಸಂಬಂಧ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಪೊಲೀಸರು ಟ್ರಕ್ ಅನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಂಗಳಾ ಪ್ರಸಾದ್ ಸಿಂಗ್ ಹೇಳಿದ್ದಾರೆ.

Join Whatsapp