ಮುಳಿಂಜ ಶಾಲೆಯಲ್ಲಿ ಕ್ರೀಡೋತ್ಸವ

Prasthutha|

ಉಪ್ಪಳ: ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡೋತ್ಸವ ಜರುಗಿತು.

- Advertisement -

ಮಂಗಲ್ಪಾಡಿ ಪಂಚಾಯತ್‌ ಸದಸ್ಯ ಅಬ್ದುಲ್ ರಹಿಮಾನ್‌ ಟಿ.ಎಂ ಅಧ್ಯಕ್ಷತೆಯಲ್ಲಿ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಎಂ ಧ್ವಜಾರೋಹಣಗೈದರು.

ಮಕ್ಕಳು, ಪೋಷಕರು ಮತ್ತು ಅಧ್ಯಾಪಕರಿಂದ ಮ್ಯಾರಥಾನ್‌ ಓಟ ನಡೆಯಿತು. ಮ್ಯಾರಥಾನ್‌ಗೆ ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಸುಷ್ಮಾ ಧ್ವಜವನ್ನು ಮುಖ್ಯೋಪಾಧ್ಯಾಯಿನಿಗೆ ನೀಡುವ ಮೂಲಕ ಚಾಲನೆ ನೀಡಿದರು.

- Advertisement -

ವಿದ್ಯಾರ್ಥಿಗಳಿಂದ ವಿವಿಧ ಆಟೋಟ ಸ್ಪರ್ಧೆಗಳು ಜರುಗಿತು. ಸಮಾರೋಪ ಸಮಾರಂಭವನ್ನು ಮಂಗಲ್ಪಾಡಿ ಪಂಚಾಯತ್‌ ಅಧ್ಯಕ್ಷೆ ರುಬೀನ ನೌಫಲ್ ಉದ್ಘಾಟಿಸಿದರು.

ಮಂಗಲ್ಪಾಡಿ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಎಸ್.ಎಂ.ಸಿ ಉಪಾಧ್ಯಕ್ಷ ಉಮ್ಮರ್‌ ಫಾರೂಕ್, ಮಶೂದ ಇಂತಿಯಾಸ್, ಫಾರಿಸ್ ರಿಯಾಸ್, ಮಹಮ್ಮದ್ ಅಸ‌ರ್, ಶುಚಿತ್ವ ಮಿಶನ್ ಸದಸ್ಯೆ ಸತ್ಯ, ಫಿರೋಜ್, ಅಪ್ಸಾ ಟೀಚರ್, ರಿಯಾಸ್ ಎಂ.ಎಸ್, ರೇವತಿ, ಜಸೀಲ, ಧನ್ಯ, ಫಾತಿಮತ್‌ ಫಝೀನ ಬಹುಮಾನ ವಿತರಿಸಿದರು.

ಬ್ಲೂ ಹೌಸ್ ತಂಡವು ಪ್ರಥಮ ಸ್ಥಾನ ಪಡೆಯಿತು. ಎಲ್ಲೋ ಹೌಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಇಸ್ಮಾಯಿಲ್ ಮಾಸ‌್ತರ್ ಸ್ವಾಗತಿಸಿ, ಅಬ್ದುಲ್ ಬಶೀರ್ ಕೆ ವಂದಿಸಿದರು.

Join Whatsapp