ಉಳ್ಳಾಲ: ಕಾಲೇಜು ಬಳಿ ಗಾಂಜಾ ಮಾರಾಟಕ್ಕೆ ಯತ್ನ; ಆರೋಪಿಯ ಬಂಧನ

Prasthutha|

ಉಳ್ಳಾಲ: ಕಾಲೇಜು ಸುತ್ತಮುತ್ತ ನಿಷೇಧಿತ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಗಾಂಜಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ದೇರಳಕಟ್ಟೆ ನಿವಾಸಿ ಶರೀಫ್‌ (30)ನನ್ನು ಉಳ್ಳಾಲ ಠಾಣಾಧಿಕಾರಿ ಎಚ್‌.ಎನ್‌. ಬಾಲಕೃಷ್ಣ ನೇತೃತ್ವದ ಉಳ್ಳಾಲ ಪೊಲೀಸರ ತಂಡ ಬಂಧಿಸಿದೆ.

- Advertisement -

ದೇರಳಕಟ್ಟೆಯ ಯೇನಪೊಯ ವೈದ್ಯಕೀಯ ಕಾಲೇಜು ಎದುರು ನಿಷೇಧಿತ ಮಾದಕ ವಸ್ತು 45 ಗ್ರಾಂ ತೂಕದ ಎಂಡಿಎಂಎ ಮಾರಾಟ ಮಾಡಲು ಆರೋಪಿ ಯತ್ನಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್‌ ಠಾಣೆಯ ಅಪರಾಧ ವಿಭಾಗದ ಪೊಲೀಸರ ಸಹಿತ ಠಾಣಾಧಿಕಾರಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಶರೀಫ್‌ ವಿರುದ್ಧ ಈಗಾಗಲೇ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸಹಿತ ಮಾದಕ ವಸ್ತುಗಳ ಮಾರಾಟ ಪ್ರಕರಣಗಳು ದಾಖಲಾಗಿವೆ.

- Advertisement -

ಉಳ್ಳಾಲ ಠಾಣೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿದ ಎಚ್‌.ಎನ್‌. ಬಾಲಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಠಾಣಾ ಸಿಬಂದಿ ರಂಜಿತ್‌, ಮಂಜುನಾಥ್‌, ಅಶೋಕ್‌ ಭಾಗವಹಿಸಿದ್ದರು.

Join Whatsapp