ಮಕ್ಕಳ ಸುರಕ್ಷತೆಗೆ ವಿಶೇಷ ಟಿ-ಶರ್ಟ್; ಹೊಸ ಆವಿಷ್ಕಾರವನ್ನು ಕೊಂಡಾಡಿದ ಉದ್ಯಮಿ ಆನಂದ್ ಮಹೀಂದ್ರಾ!

Prasthutha|

ಮುಂಬೈ: ತೆರೆದ ಜಲಮೂಲಗಳ ಸುತ್ತಮುತ್ತ ಮಕ್ಕಳ ಸುರಕ್ಷತೆಯ ಕಾಳಜಿಯನ್ನು ಪರಿಹರಿಸಲು, ಫ್ರೆಂಚ್ ಕಂಪನಿ ಫ್ಲೋಟೀ ವಿಶೇಷ ಟಿ-ಶರ್ಟ್‌ಗಳನ್ನು ಅಭಿವೃದ್ಧಿಪಡಿಸಿದೆ. ಇದು ಮಕ್ಕಳು ಅಕಸ್ಮಾತ್ತಾಗಿ ನೀರಿಗೆ ಬಿದ್ದರೆ, ಟಿ-ಶರ್ಟ್‌ ನೀರಿನಲ್ಲಿ ಒದ್ದೆಯಾದೊಡನೆ ಲೈಫ್ ಜಾಕೆಟ್‌ಗಳಾಗಿ ಪರಿವರ್ತಿಸುತ್ತದೆ. ಈ ಆವಿಷ್ಕಾರವನ್ನು ಆನಂದ್ ಮಹಿಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಕೊಂಡಾಡಿದ್ದಾರೆ.

- Advertisement -

18 ತಿಂಗಳಿಂದ ಆರು ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಈ ನವೀನ ಟಿ-ಶರ್ಟ್‌ಗಳು ತ್ವರಿತ ತೇಲುವ ಬೆಂಬಲವನ್ನು ಒದಗಿಸುವ ಮೂಲಕ ಪೋಷಕರಿಗೆ ಮನಸ್ಸಿನ ಶಾಂತಿಯನ್ನು ನೀಡುತ್ತವೆ. ವ್ಯಾಪಾರ ಉದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಈ ಆಂಟಿ-ಡ್ರೋನಿಂಗ್ ಟಿ-ಶರ್ಟ್‌ಗಳ ಕ್ರಿಯಾತ್ಮಕತೆಯನ್ನು ಪ್ರದರ್ಶಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

“ಯಾವುದೇ ನೊಬೆಲ್ ಪುರಸ್ಕೃತ ವಸ್ತುಗಳಿಗಿಂತ ಕಡಿಮೆ ಇಲ್ಲ ಆವಿಷ್ಕಾರ, ನಿಜ ಹೇಳುವುದಾದರೆ ಅವುಗಳಿಗಿಂತ ಇದು ಎಷ್ಟೋ ಮೇಲು. ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತದೆ. ನಾನು ಎರಡು ಪುಟ್ಟ ಮಕ್ಕಳ ತಾತ, ಹಾಗಾಗಿ ಇದರ ಪ್ರಾಮುಖ್ಯತೆ ನನಗೆ ಅರಿವಿದೆ.” ಎಂಬ ಶೀರ್ಷಿಕೆಯನ್ನು ಮಹಿಂದ್ರಾ ನೀಡಿದ್ದಾರೆ. ಟ್ವೀಟ್ ಬಳಕೆದಾರರಿಂದ ಪ್ರಶಂಸೆಯನ್ನು ಪಡೆದಿದೆ.

- Advertisement -

ಮಹೀಂದ್ರಾ ಅವರ ಟ್ವೀಟ್‌ಗೆ 14,000 ಕ್ಕೂ ಹೆಚ್ಚು ಲೈಕ್ ನೀಡಿದ ಬಳಕೆದಾರರು ಜೀವ ಉಳಿಸುವ ಆವಿಷ್ಕಾರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. Floatee ಸಿಇಓ, ಜೀನ್-ಪಿಯರೆ ಡುಬೋಯಿಸ್, ಈ ಆಂಟಿ-ಡ್ರೋನಿಂಗ್ ಟಿ-ಶರ್ಟ್‌ಗಳನ್ನು ಜಗತ್ತಿಗೆ ಪರಿಚಯಿಸುವ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದರು, ಜೀವಗಳನ್ನು ಉಳಿಸುವ ಮತ್ತು ಜಾಗತಿಕವಾಗಿ ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಒತ್ತಿ ಹೇಳಿದ್ದಾರೆ.

Join Whatsapp