ಸೌದಿ ಅರೇಬಿಯಾದಲ್ಲಿ ಮಹಿಳಾ ವಕೀಲರ ಸಂಖ್ಯೆಯಲ್ಲಿ ಹೆಚ್ಚಳ

Prasthutha|

- Advertisement -

ರಿಯಾದ್: ಸೌದಿ ಅರೇಬಿಯಾದ ನ್ಯಾಯ ಸಚಿವಾಲಯದಿಂದ ಪರವಾನಗಿ ಪಡೆದ ಮಹಿಳಾ ವಕೀಲರ ಸಂಖ್ಯೆ ಶೇಕಡಾ 61 ರಷ್ಟು ಹೆಚ್ಚಾಗಿದೆ ಎಂದು ಸಚಿವಾಲಯದ ಮಹಿಳಾ ವಿಭಾಗದ ಮುಖ್ಯಸ್ಥೆ ನೂರ ಅಲ್-ಗುನೈಮ್ ಹೇಳಿದ್ದಾರೆ.

ಕಳೆದ ವರ್ಷದ ಅಂತ್ಯದ ವೇಳೆಗೆ ಮಹಿಳಾ ವಕೀಲರ ಸಂಖ್ಯೆ 1,029 ಕ್ಕೆ ಏರಿದೆ. 2019 ರ ಕೊನೆಯಲ್ಲಿ ಮಹಿಳಾ ವಕೀಲರ ಸಂಖ್ಯೆ 618 ಆಗಿತ್ತು. 2020ರಲ್ಲಿ 411 ಮಹಿಳಾ ವಕೀಲರಿಗೆ ಪರವಾನಗಿ ನೀಡಲಾಗಿದೆ. ಕಳೆದ ವರ್ಷ ನ್ಯಾಯ ಸಚಿವಾಲಯವು ಇತಿಹಾಸದಲ್ಲಿ ಮೊದಲ ಬಾರಿಗೆ  ಮಹಿಳೆಯರನ್ನು ವೃತ್ತಿಪರ ಕೆಲಸಗಾರರಾಗಿ ನೇಮಿಸಿತ್ತು. ಪ್ರಸ್ತುತ, ನ್ಯಾಯ ಸಚಿವಾಲಯದ ಅಧೀನದಲ್ಲಿ 1814 ಮಹಿಳಾ ಉದ್ಯೋಗಿಗಳು ಇದ್ದಾರೆ.

- Advertisement -

ಸಚಿವಾಲಯದ ಅಧೀನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕಳೆದ ವರ್ಷ 30,500 ಕ್ಕೂ ಹೆಚ್ಚು ಕಕ್ಷಿದಾರರಿಗೆ ವಕಾಲತ್ತು ಸೇವೆಗಳನ್ನು ಒದಗಿಸಿದ್ದಾರೆ. ನ್ಯಾಯಾಲಯಗಳು ಮತ್ತು ನೋಟರಿ ಸಾರ್ವಜನಿಕ ಕಚೇರಿಗಳಲ್ಲಿಯೂ ಮಹಿಳಾ ವಕೀಲರು ಸೇವೆ ಸಲ್ಲಿಸುತ್ತಿದ್ದಾರೆ. ಪರವಾನಗಿ ಪಡೆದ ವಕೀಲರು ಮತ್ತು ಅವರ ಸೇವೆಗಳ ಬಗ್ಗೆ ಮಾಹಿತಿ ನ್ಯಾಯ ಸಚಿವಾಲಯದ ಪೋರ್ಟಲ್‌ನಲ್ಲಿ ಲಭ್ಯವಿದೆ.



Join Whatsapp