ಸಾಲಿಡಾರಿಟಿ ಯೂತ್ ಮೂವ್’ಮೆಂಟ್’ನಿಂದ ಉತ್ತಮ ಆರೋಗ್ಯ – ಉತ್ತಮ ಜೀವನ ಅಭಿಯಾನಕ್ಕೆ ಚಾಲನೆ

Prasthutha|

ಬೆಂಗಳೂರು: ಉತ್ತಮ ಆರೋಗ್ಯ – ಉತ್ತಮ ಜೀವನ ಎಂಬ ಶೀರ್ಷಿಕೆಯಲ್ಲಿ ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಫೆಬ್ರವರಿ 5 ರಿಂದ 25 ರವರೆಗೆ ಆರೋಗ್ಯ ಮತ್ತು ದೈಹಿಕ ಸ್ವಾಸ್ಥ್ಯದ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.

- Advertisement -


ಈ ಅಭಿಯಾನವನ್ನು ಜಮಾಅತ್ ಎ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ| ಮುಹಮ್ಮದ್ ಸಾದ್ ಬೆಲ್ಗಾಮಿ ಅವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತ ಚಾಲನೆಯನ್ನು ನೀಡಿದರು.
ಆರೋಗ್ಯವೆಂಬುವುದು ಸಂಪೂರ್ಣ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಯೋಗ ಕ್ಷೇಮದ ಸ್ಥಿತಿ. ಅದು ಕೇವಲ ಕಾಯಿಲೆ ಅಥವಾ ದೈಹಿಕ ದೌರ್ಬಲ್ಯದ ಹೆಸರಲ್ಲ. ಅಂದರೆ ಒಬ್ಬ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಆರೋಗ್ಯವು ಅತೀ ಅಗತ್ಯ. ಕುಟುಂಬ ಸಮಾಜ ಹಾಗೂ ದೇಶದ ಪ್ರಗತಿ ಆ ಸಮಾಜದ ಜನರ ಹಾಗೂ ಅಲ್ಲಿನ ಪರಿಸರದ ಆರೋಗ್ಯಕರ ಬೆಳವಣಿಗೆಯನ್ನು ಅವಲಂಬಿಸಿದೆ. “ಆರೋಗ್ಯಕರವಾದ ಮನಸ್ಸು ಆರೋಗ್ಯವಾದ ದೇಹದೊಳಗೆ” ಎನ್ನುವ ನಾಣ್ನುಡಿಯಂತೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಈ ಸಮತೋಲನವು ಅತೀ ಅಗತ್ಯ. ಪರಿಪೂರ್ಣ ಆರೋಗ್ಯ ವೈಯಕ್ತಿಕ, ಸಾಮಾಜಿಕ ಹಾಗೂ ನೈತಿಕ ಪ್ರಜ್ಞೆ ಮತ್ತು ಜವಾಬ್ದಾರಿಯಿಂದ ಮಾತ್ರ ಬರುವುದು. ಆರೋಗ್ಯಕರ ಜೀವನ ಶೈಲಿ ಮನುಷ್ಯನನ್ನು ಸದಾ ಸದೃಢವಾಗಿ, ಶಕ್ತಿಯುತವಾಗಿ ಹಾಗೂ ಆರೋಗ್ಯವಾಗಿರಿಸುತ್ತದೆ.


17 ರಾಜ್ಯಗಳ ಪೈಕಿ 11 ರಾಜ್ಯಗಳಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು (ಸ್ಟಂಟಿಂಗ್) ದನ್ನು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5 (ಎನ್ಎಫ್ಎಚ್ಎಸ್-5; 2019-2020) ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (NFHS) ಪ್ರಕಾರ, 1975 ರಿಂದ ವಿಶ್ವದಾದ್ಯಂತ ಬೊಜ್ಜು (obesity) ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇಂಡಿಯನ್ ಜರ್ನಲ್ ಆಫ್ ಕಮ್ಯುನಿಟಿ ಮೆಡಿಸಿನ್ (Indian Journal of Community Medicine)ಪ್ರಕಾರ ಭಾರತದಲ್ಲಿ 135 ಮಿಲಿಯನ್ ಜನರು (Obesity in India) ಬೊಜ್ಜು ಹೊಂದಿದ್ದಾರೆ. ಇದಲ್ಲದೆ, ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (NCBI) 2030 ರ ವೇಳೆಗೆ ವಿಶ್ವದಾದ್ಯಂತ 27.8 ಶೇಕಡಾ ಬೊಜ್ಜು ಭಾರತೀಯರಲ್ಲಿ ಕಾಣಸಿಗುತ್ತದೆ ಎಂದು ಹೇಳಿದೆ. ಈಗ ಯುವ ಜನಾಂಗದಲ್ಲೂ ಹೃದಯಾಘಾತ ಸಾಮಾನ್ಯವಾಗಿದೆ. ಆಲ್ಕೋಹಾಲ್ ಸೇವನೆ, ಮಾದಕ ದ್ರವ್ಯಗಳ ವ್ಯಸನ, ಕಳಪೆ ಅಹಾರ, ಮಧುಮೇಹ, ರಕ್ತದೊತ್ತಡ, ದೈಹಿಕ ಚಟುವಟಿಕೆಗಳ ಕೊರತೆ ಇತ್ಯಾದಿ ಅನಿಯಂತ್ರಿತ ಜೀವನ ವ್ಯವಸ್ಥೆ ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಒಂದು ಮನೆಯಲ್ಲಿ ಒಬ್ಬ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ರೋಗಿಯಿದ್ದಾನೆ ಎಂದು ವರದಿಗಳು ಹೇಳುತ್ತದೆ.
ಒಬ್ಬ ವ್ಯಕ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಥಮ ಹೊಣೆಗಾರಿಕೆ ವ್ಯಕ್ತಿ ಎಂಬ ನೆಲೆಯಲ್ಲಿ ಅವನದ್ದಾಗಿದೆ. ನಾವು ರೂಡಿಸಿಕೊಂಡಿರುವ ಜೀವನಶೈಲಿ, ಆಹಾರ ಪದ್ಧತಿ ಇತ್ಯಾದಿಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆರೋಗ್ಯವೆಂಬುವುದು ದೇವನು ನೀಡಿದ ಅನುಗ್ರಹವಾಗಿದೆ. ಆರೋಗ್ಯ ಸಂರಕ್ಷಣೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಅದರ ಬೆಲೆಯನ್ನು ಅರಿತು ನಾವು ಬಾಳಬೇಕಾಗಿದೆ. ಒಮ್ಮೆ ಕ್ಷೀಣಿಸಿದ ಶರೀರವು ಪುನಃ ಪೂರ್ವ ಸ್ಥಿತಿಗೆ ಬರಲು ಬಹಳ ಶ್ರಮವಹಿಸಬೇಕಾಗುತ್ತದೆ. ಸಣ್ಣ ಗೆದ್ದಲುಗಳು ದೊಡ್ಡ ದೊಡ್ಡ ಗ್ರಂಥಗಳನ್ನೇ ತಿನ್ನುವಂತೆ ಸಣ್ಣ ಪುಟ್ಟ ರೋಗಗಳು ನಮ್ಮ ಜೀವವನ್ನು ಅಪಾಯಕ್ಕೀಡು ಮಾಡಲು ಸಾಕಾಗುತ್ತದೆ.

- Advertisement -


ಸದೃಡವಾದ ದೇಹದಲ್ಲಿ ಸಬಲ ಮನಸ್ಸಿರುವಂತೆ ವ್ಯಕ್ತಿ ದೈಹಿಕವಾಗಿಯೂ ಮಾನಸಿಕವಾಗಿಯೂ ಬಲಿಷ್ಠನಾಗಬೇಕು. ಆದ್ದರಿಂದ ಯುವ ಜನತೆಗೆ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಅಗತ್ಯವಾದ ಜಾಗೃತಿ ಹಾಗೂ ತರಬೇತಿಯನ್ನು ಒದಗಿಸುವ ಸಲುವಾಗಿ ಸಾಲಿಡಾರಿಟಿ ಯೂತ್’ಮೂವ್’ಮೆಂಟ್ “ಉತ್ತಮ ಆರೋಗ್ಯ- ಉತ್ತಮ ಜೀವನ” ಎಂಬ ಶೀರ್ಷಿಕೆಯಲ್ಲಿ ರಾಜ್ಯವ್ಯಾಪಿಯಾಗಿ ಫೆಬ್ರವರಿ 5 ರಿಂದ 25 ರವರೆಗೆ ಒಂದು ಅಭಿಯಾನವನ್ನು ನಡೆಸಲು ಮುಂದಾಗಿದೆ. ಈ ಅಭಿಯಾನದ ಪ್ರಯುಕ್ತ, ಆರೋಗ್ಯದ ಕುರಿತು ಜಾಗೃತಿ ಸಭೆಗಳು, ಉಪನ್ಯಾಸಗಳು, ಬೀದಿನಾಟಕಗಳು, ಕ್ರೀಡೆ ಮತ್ತು ದೈಹಿಕ ತರಬೇತಿ ಕೇಂದ್ರಗಳ ಸ್ಥಾಪನೆ (Sports and Wellness centre) ಮಾರಥಾನ್, ಬೀದಿನಾಟಕ, ಆಟೋಟ ಸ್ಪರ್ಧೆ ಹಾಗೂ ಆರೋಗ್ಯ ಮತ್ತು ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿರುವ ಯುವಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Join Whatsapp