ಮಂಗಳೂರು | ಚಿನ್ನದ ಅಂಗಡಿಯಲ್ಲಿ ಚೂರಿ ಇರಿತ: ವ್ಯಕ್ತಿ ಸಾವು

Prasthutha|

ಮಂಗಳೂರು: ಚಿನ್ನದ ಅಂಗಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ನಗರದ ಹಂಪನಕಟ್ಟೆಯ ಬಳಿ ನಡೆದಿದೆ.

- Advertisement -

ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಈ ಘಟನೆ ಇಂದು ಸಂಜೆ 4. 15ರ ಸುಮಾರಿಗೆ ನಡೆದಿದೆ. ಚೂರಿ ಇರಿತದಿಂದ ಮೃತಪಟ್ಟ ವ್ಯಕ್ತಿಯನ್ನು ಅತ್ತಾವರ ನಿವಾಸಿ ರಾಘವ ಆಚಾರಿ (50) ಎಂದು ಗುರುತಿಸಲಾಗಿದೆ.

ಚೂರಿ ಇರಿತದಿಂದ ಗಾಯಗೊಂಡಿರುವ ಯುವಕನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಅಂಗಡಿಯಲ್ಲಿ ಯುವಕ ಒಬ್ಬರೇ ಇದ್ದರೆಂದು ತಿಳಿದುಬಂದಿದೆ. ಸಿಸಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿರುವ ಸಾಧ್ಯತೆಯಿದ್ದು, ಪರಿಶೀಲನೆ ನಡೆಯುತ್ತಿದೆ.

- Advertisement -

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ರಾಘವ ಅವರು ಗೋಲ್ಡ್ ಪ್ಯಾಲೆಸ್ ಜ್ಯುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಮಂಗಳೂರು ಜ್ಯುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ, ಪತ್ನಿಯನ್ನು ಅಗಲಿದ್ದಾರೆ.

ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮುಸುಕು ಧರಿಸಿ ಬಂದ ದುಷ್ಕರ್ಮಿಗಳು ಅಂಗಡಿಯೊಳಗೆ ಚೂರಿ ಇರಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp