ರಾಜ್ಯಸಭೆಯಲ್ಲಿ ಕೊನೆಯ ಸಾಲಿಗೆ ಹೋದ ಮನಮೋಹನ್ ಸಿಂಗ್, ಎದುರು ಬಂದ ಚಿದಂಬರಂ, ದಿಗ್ವಿಜಯ್

Prasthutha|

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜ್ಯ ಸಭೆಯಲ್ಲಿನ ಮೊದಲ ಸಾಲಿನ ಸ್ಥಾನವನ್ನು ಕೊನೆಯ ಸಾಲಿಗೆ ಬದಲಾಯಿಸಲಾಗಿದೆ. ಅಲ್ಲಿ ಅವರು ಗಾಲಿ ಕುರ್ಚಿಯಲ್ಲಿ ಬಂದು ಹೋಗಲು ಅನುಕೂಲ ಎಂದು ಈ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ.

- Advertisement -


ಕಾಂಗ್ರೆಸ್ ನಾಯಕರಾದ ದಿಗ್ವಿಜಯ ಸಿಂಗ್ ಮತ್ತು ಪಿ. ಚಿದಂಬರಂ ಅವರಿಗೆ ಪಕ್ಷವು ತನ್ನ ಮೊದಲ ಸಾಲಿನ ಸ್ಥಾನಗಳನ್ನು ಈಗ ಒದಗಿಸಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪ್ರಾಯ 90; ಗಾಲಿ ಕುರ್ಚಿ ಆಶ್ರಯಿಸಿದ್ದಾರೆ. ಅವರ ರಾಜ್ಯಸಭೆಯ ಅವಧಿಯೂ ಇನ್ನು ಹೆಚ್ಚು ಕಾಲ ಇಲ್ಲ.


ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆಯವರು ತನ್ನ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಅವರ ಮುಂದೆ ಉಪ ಸಭಾಪತಿ ಆಗಿರುವ ಹರಿವಂಶ್ ರಾಯ್ ಆಸನ ಇರುತ್ತದೆ.

- Advertisement -


ಪ್ರತಿ ಪಕ್ಷಗಳಲ್ಲಿ ಮೊದಲ ಸ್ಥಾನ ಪಡೆದಿರುವ ಇತರರೆಂದರೆ ಜೆಡಿಎಸ್ ನ ಎಚ್. ಡಿ. ದೇವೇಗೌಡ, ಎಎಪಿಯ ಸಂಜಯ್ ಸಿಂಗ್, ಆರ್ ಜೆಡಿಯ ಪ್ರೇಂಚಂದ್ ಗುಪ್ತ, ಟಿಎಂಸಿಯ ಡೆರಿಕ್ ಓಬ್ರೀನ್, ಬಿಆರ್ ಎಸ್ ನ ಕೇಶವರಾವ್ ಮತ್ತು ಡಿಎಂಕೆಯ ತಿರುಚಿ ಶಿವ.


ಬಿಜೆಪಿ ಸಹ ತನ್ನ ಮೊದಲ ಸಾಲಿನಲ್ಲಿ ಏನೂ ಬದಲಾವಣೆ ಮಾಡದಿದ್ದರೂ ಹಿಂದಿನ ಸಾಲುಗಳಲ್ಲಿ ಕೆಲವು ಸ್ಥಳ ಬದಲಾವಣೆಗಳನ್ನು ಸೂಚಿಸಿದೆ.

Join Whatsapp