ಮಾನವ ಹಕ್ಕುಗಳ ಉಲ್ಲಂಘನೆಗೆ ಸಾಮಾಜಿಕ ಮಾಧ್ಯಮಗಳು ಪುರಾವೆ ಸಂಗ್ರಹಿಸಲಿ: ಮಾನವ ಹಕ್ಕು ಆಯೋಗ

Prasthutha|

ಕಾಬೂಲ್: ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆದಿದೆಯೆಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ ಪ್ರಸಕ್ತ ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘಣೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮಾನವಹಕ್ಕು ಆಯೋಗವು, ಸಾಮಾಜಿಕ ಮಾಧ್ಯಮ ಮಾನವಹಕ್ಕು ಉಲ್ಲಂಘಣೆಯ ಕುರಿತು ಪುರಾವೆಯನ್ನು ಸಂಗ್ರಹಿಸಿ ಸಂರಕ್ಷಿಸಲಿ ಎಂದು ಆಗ್ರಹಿಸಿದೆ.

- Advertisement -

ಪ್ರಸಕ್ತ ಪರಿಸ್ಥಿತಿಯಲ್ಲಿ ಮಾನವ ಹಕ್ಕು ಸಂಸ್ಥೆ, ಆಕ್ಸೆಸ್ ನೌ, ಅಮ್ನೆಸ್ಟಿ ಇಂಟರ್ ನ್ಯಾಷನಲ್, ಅಮೆರಿಕದ ಹ್ಯೂಮನ್ ರೈಟ್ಸ್ ವಾಚ್ ಮುಂತಾದ ಸಂಘಟನೆಗಳು ಅಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘಣೆಗೆ ಪುರಾವೆಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳು ಮುಂದಾಗಲಿಯೆಂದು ತಿಳಿಸಿದೆ.

ಈ ನಿಟ್ಟಿನಲ್ಲಿ ಫೇಸ್ಬುಕ್, ಟ್ವಿಟ್ಟರ್, ಯೂಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಯನ್ನಾಗಿಸುವಂತೆ ಮಾನವ ಹಕ್ಕುಗಳ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕರನ್ನು ಕೋರಿದೆ.

Join Whatsapp