ಶಾಲೆಗೆ ಬಂದ ಕಾಬೂಲ್ ಬಾಲೆಯರು

Prasthutha|

ಕಾಬೂಲ್: ಅಮೆರಿಕ ಸೈನ್ಯ ಅಫ್ಘಾನಿಸ್ತಾನ ತೊರೆದ ಬೆನ್ನಲ್ಲೇ ದೇಶಾದ್ಯಂತ ಸ್ವಾತಂತ್ರ್ಯದ ಸಂಭ್ರಮ ಕಂಡುಬರುತ್ತಿದ್ದು, ಕಾಬೂಲಿನ ರಸ್ತೆಗಳಲ್ಲಿ ತಾಲಿಬಾನ್ ಪಡೆ ಗಸ್ತು ತಿರುಗುತ್ತಿದೆ. ಈ ಮಧ್ಯೆ ಬಾಲಕಿಯರು ಶಾಲೆಗೆ ಹಾಜರಾಗುತ್ತಿದ್ದ ದೃಶ್ಯ ಕಂಡುಬಂತು.
“ನಾನೇಕೆ ತಾಲಿಬಾನಿಗರಿಗೆ ಹೆದರಬೇಕು?” ಎಂದು 5ನೇ ತರಗತಿಯ ಬಾಲಕಿ ಮಸೂದಾ ಎಸೋಸಿಯೇಟೆಡ್ ಪ್ರೆಸ್ ನವರಿಗೆ ಕೇಳಿದ್ದಾಳೆ.

- Advertisement -


ಸಣ್ಣ ತರಗತಿಗಳಲ್ಲಿ ಮೊದಲಿರುವಂತೆಯೇ ತರಗತಿಗಳು ಇರುತ್ತವೆ. ಮಹಿಳೆಯರು ಕಾಲೇಜು ಮಟ್ಟದಲ್ಲಿ ಕಲಿಯಲು ಪ್ರತ್ಯೇಕ ಮಹಿಳಾ ತರಗತಿ ಮತ್ತು ಮಹಿಳಾ ಲೆಕ್ಚರರ್ ಒದಗಿಸಲಾಗುತ್ತದೆ ಎಂದು ಹಂಗಾಮಿ ತಾಲಿಬಾನ್ ಉನ್ನತ ಶಿಕ್ಷಣ ಸಚಿವರಾದ ಅಬ್ದುಲ್ ಬಕೀ ಹಕ್ಕಾನಿಯವರು ಸ್ಪಷ್ಟಪಡಿಸಿದ್ದಾರೆ.


ಹೆಣ್ಣುಮಕ್ಕಳ ಕಾಲೇಜು ಶಿಕ್ಷಣದಲ್ಲಿ ಶರಿಯಾ ಕಾನೂನು ಪಾಲಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಸರ್ಕಾರವು, ರಾಷ್ಟ್ರೀಯ ಚಾರಿತ್ರಿಕ ಮೌಲ್ಯ, ಸಾಮಾಜಿಕ ಸಮತೋಲನ ಮತ್ತು ಇಸ್ಲಾಮಿಕ್ ನಿಯಮಗಳ ಪ್ರಕಾರ ಶಿಕ್ಷಣ ಕ್ಷೇತ್ರವನ್ನು ಮುನ್ನಡೆಸಲಿದೆ ಎಂದು ಅವರು ಹೇಳಿದರು.

Join Whatsapp