ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆ; ಮಂಗಳೂರು ಕಮಿಷನರ್ ರಿಂದ ಮಾನಸಿಕ ಕಿರುಕುಳ: ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಆರೋಪ

Prasthutha|

ಮಂಗಳೂರು: “ಪೊಲೀಸರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಹಾಗೂ ಕೆಆರ್ ಎಸ್ ಪಕ್ಷದ ಮುಖಂಡ ಕಬೀರ್ ಉಳ್ಳಾಲ್ ಆರೋಪಿಸಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇ ಪದೇ ನನಗೆ ಕರೆ ಮಾಡುವುದಲ್ಲದೇ, ಮನೆಗೆ ಪೊಲೀಸರನ್ನು ಕಳುಹಿಸಿ ನನ್ನ ಹೆಂಡತಿ ಮಕ್ಕಳನ್ನು ಭಯ ಪಡಿಸುತ್ತಿದ್ದಾರೆ. ನನ್ನನ್ನು ವಿಚಾರಣೆಗಾಗಿ ಕಛೇರಿಗೆ ಬರಬೇಕೆಂದು ಆಗಾಗ್ಗೆ ಕಾಲ್ ಮಾಡಿ ನೋಟೀಸು ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ” ಎಂದು ಹೇಳಿದರು.


ಈ ಹಿಂದೆ ಇಂತಹ ಮಾನಸಿಕ ಹಿಂಸೆ ಅನುಭವಿಸಿಲ್ಲ. ಇದರ ಹಿಂದೆ ನಗರ ಪೊಲೀಸ್ ಕಮಿಷನರ್ ಅವರ ಪಾತ್ರವಿರುವಂತೆ ತೋರುತ್ತಿದೆ . ಕಮಿಷನರ್ ಕಚೇರಿಯ ಪೊಲೀಸರ ಮಾನಸಿಕ ಕಿರುಕುಳದಿಂದ ಬೇಸತ್ತಿದ್ದೇನೆ. ನಾನು ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಹೆಸರಿಸಿದ ಅಧಿಕಾರಿಗಳಿಂದಲೇ ತನಿಖೆ ನಡೆಸಲು ಆದೇಶಿಸುವುದಾದರೆ ನಾವು ದೂರು ನೀಡಿ ಫಲವೇನು ಎಂದು ಪ್ರಶ್ನಿಸಿದರು.

Join Whatsapp