ಜಾಗತಿಕ ವಿವಿಗಳಲ್ಲಿ ಪದವಿ ಪಡೆಯಲು ಬಯಸುವವರಿಗಾಗಿ ಬೃಹತ್ ಶೈಕ್ಷಣಿಕ ಮೇಳ “ಘೆಡೆಕ್ಸ್” ಎಕ್ಸ್ ಪೋ : ಶಾಸಕ ಎನ್.ಎ. ಹ್ಯಾರೀಸ್ ಚಾಲನೆ

Prasthutha|

ಬೆಂಗಳೂರು;  ಜಾಗತಿಕ ವಿವಿಗಳಲ್ಲಿ ಪದವಿ ಪಡೆಯಲು ಬಯಸುವವರಿಗಾಗಿ ನಗರದಲ್ಲಿ ಬೃಹತ್ ಮಟ್ಟದ “ಘೆಡೆಕ್ಸ್” ಎಕ್ಸ್ ಪೋ ಆಯೋಜಿಸಲಾಗಿತ್ತು.

- Advertisement -

ಎಂ.ಜಿ. ರಸ್ತೆಯ ತಾಜ್ ಹೋಟೆಲ್ ನಲ್ಲಿ ನಡೆದ (ಫೆ 6 ಮತ್ತು7) ಎರಡು ದಿನಗಳ  ಜಾಗತಿಕ ವಿವಿಗಳ ಸಲಹೆಗಾರರು ಸಮಾವೇಶಗೊಂಡಿದ್ದು, ಸೂಕ್ತ ಮಾರ್ಗದರ್ಶನ ನೀಡಿದರು. ಸುಮಾರು 20 ಕ್ಕೂ ಹೆಚ್ಚು ವಿದೇಶಿ ವಿವಿಗಳು ಮೇಳದಲ್ಲಿ ಪಾಲ್ಗೊಂಡಿದ್ದವು.

ಎಕ್ಸ್ ಪೋಗೆ ಚಾಲನೆ ನೀಡಿದ ಶಾಸಕ ಎನ್.ಎ. ಹ್ಯಾರೀಸ್, ಅಮೆರಿಕ, ಬ್ರಿಟನ್, ಭಾರತ, ಫ್ರಾನ್ಸ್ ಮತ್ತು ಇಟಲಿ ವಿಶ್ವವಿದ್ಯಾಲಯದ ಸಲಹೆಗಾರರು ಭಾಗವಹಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ ಎಂದರು.

- Advertisement -

ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆಯ ಪ್ರಾಂಶುಪಾಲರು ಘೆಡೆಕ್ಸ್ ನ ಪಾಲುದಾರರಾಗಿದ್ದು, ಇದು ಯುನಿ ಇಟಲಿಯಾ ಅಧ್ಯಯನ ಕೇಂದ್ರದಿಂದ ಬೆಂಬಲಿತವಾಗಿದೆ. ಗುಣಮಟ್ಟದ ಶೈಕ್ಷಣಿಕ  ಕಾರ್ಯಕ್ರಮಗಳು, ವಿವಿಧ ಕೋರ್ಸ್ ಗಳು ಮತ್ತು ಪಠ್ಯ ಕ್ರಮಗಳನ್ನು ತಿಳಿಯಲು ಇದು ಸದಾವಕಾಶವಾಗಿದೆ. ಫೈನ್ ಎಕ್ಸ್ ಪೀರಿಯನ್ಷಿಯಲ್ ಈವೆಂಟ್ ಪ್ರವೈಟ್ ಲಿಮಿಟೆಡ್ ಈ ಕಾರ್ಯಕ್ರಮ ಆಯೋಜಿಸಿದೆ.

“ಘೆಡೆಕ್ಸ್” ಮುಖ್ಯ ಆಯೋಜಕ – ಸಿಇಒ ಸಿದ್ಧಿಕ್ ಅಹ್ಮದ್ ಖಾನ್, ಮಾರುಕಟ್ಟೆ ವಿಭಾಗದ ಮುಖ‍್ಯಸ್ಥ ಖದೀರ್ ಅಹಮದ್ ಖಾನ್, ಮಾರಾಟ ವಿಭಾದ ಮುಖ್ಯಸ್ಥ ಖಬೀರ್ ಅಹ್ಮದ್ ಖಾನ್ ಮತ್ತು ಬೆಂಗಳೂರು ಅಸೋಸಿಯೇಟ್ ನ ಮೆಹಬೂಬುಲ್ಲಾ ಖಾನ್ ಪಾಲ್ಗೊಂಡಿದ್ದರು.

ಹೆಚ್ಚಿನ ಮಾಹಿತಿಗೆ : www.ghedex.om/india  / www.iieduex.com