ವಾತಾವರಣದಲ್ಲಿನ ಇಂಗಾಲವನ್ನು ಹೀರಿ ಗಾಳಿಯನ್ನು ಶುದ್ಧೀಕರಿಸುವ ಬಲೂನ್ ತಂತ್ರಜ್ಞಾನದ ಅಭಿವೃದ್ಧಿ : ಇಸ್ರೇಲ್ ಕಂಪೆನಿ ಘೋಷಣೆ

Prasthutha|

ಪಶ್ಚಿಮದಂಡೆ: ಜಾಗತಿಕ ತಾಪಮಾನದ ಕಡಿಮೆಗೊಳಿಸುವ ನಿಟ್ಟಿನಲ್ಲಿ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಬಳಕೆ ಮಾಡುವ ಬಲೂನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇಸ್ರೇಲ್ ಮೂಲದ ನೂತನ ಕಂಪೆನಿ ನದಮ್ ನ ಸಿಇಒ ಮಾನ್ಸ್ಡೋರ್ಫ್ ತಿಳಿಸಿದ್ದಾರೆ.

- Advertisement -

ಪ್ರಸಕ್ತ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ, ಕೈಗಾರಿಕಾ ಕೃಷಿಗಾಗಿ ಬಳಸುವ ಇಂಧನದ ದಹನ ಕ್ರಿಯೆ ಹವಾಮಾನ ಕಲುಷಿತಗೊಳ್ಳಲು ಪ್ರಮುಖ ಕಾರಣ. ಆದರೆ ಪ್ರಮಾಣಿತ ತಾಪಮಾನವನ್ನು ವಾತಾವರಣದಿಂದ CO2 ಅನ್ನು ತೆಗೆದು ಹಾಕುವುದರಿಂದ ಸರ್ಕಾರ ಮತ್ತು ಕಂಪೆನಿಗೆ ಪರಿಣಾಮಕಾರಿ ವೆಚ್ಚ ಅಗತ್ಯವಿರುತ್ತದೆ ಎಂದು ಉಲ್ಲೇಖಿಸಿದರು. ಹೈ ಹೋಪ್ಸ್ ಲ್ಯಾಬ್ಸ್ ನಲ್ಲಿ ಇಂಗಾಲ ಡೈಆಕ್ಸೈಡ್ ಅನ್ನು ಸೆರೆಹಿಡಿಯುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಬಹುತೇಕ ಘನೀಕರಿಸಲ್ಪಟ್ಟಿದ್ದು, ಅದು ಭೂಮಿಯಿಂದ ದೂರದಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಘನೀಕರಿಸುವ ಸಮೀಪದಲ್ಲಿ ಅನಿಲವನ್ನು ಸೆರೆಹಿಡಿಯುವುದು ತುಂಬಾ ಸುಲಭ ಎಂದು ನದಮ್ ಕಂಪೆನಿಯ ಸಿಇಒ ಮಾನ್ಸ್ಡೋರ್ಫ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಗ್ಯಾಸ್ ತುಂಬಿದ ಬಲೂನ್ ಗಳನ್ನು ಬಾಕ್ಸ್ ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ನಂತರ ಅದು ಕೆಳಗೆ ಲಗತ್ತಿಸಲಾದ ಕಾರ್ಬನ್ – ಕ್ಯಾಪ್ಚರ್ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿಯ ಪರವಾಗಿ ಮ್ಯಾನ್ಸ್ಡೋರ್ಫ್ ತಿಳಿಸಿದ್ದಾರೆ.

- Advertisement -

ಹೆಪ್ಪುಗಟ್ಟಿದ ಕಾರ್ಬನ್ ನಂತರ ಭೂಮಿಗೆ ಹಿಂದಿರುಗುತ್ತದೆ. ಅಲ್ಲಿ ಅದನ್ನು ಕೈಗಾರಿಕಾ ಬಳಕೆಗಾಗಿ ಮರುಬಳಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಮಾತ್ರವಲ್ಲ ಕಂಪೆನಿ ಎರಡು ವರ್ಷಗಳಲ್ಲಿ ಇನ್ನಷ್ಟು ಬೃಹತ್ ಗಾತ್ರದ ಬಲೂನ್ ಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಬಳಕೆಯಿರುವ ಸೌಲಭ್ಯಕ್ಕಿಂತ, ಪ್ರತಿಯೊಂದು ದಿನಕ್ಕೆ ಒಂದು ಟನ್ ಇಂಗಾಲವನ್ನು ತೆಗೆದು ಹಾಕಲು 100 ಡಾಲರ್ ಗಿಂತ ಕಡಿಮೆ ವೆಚ್ಚದಲ್ಲಿ ನಿಯೋಜಿಸಬಹುದು ಎಂದು ಮ್ಯಾನ್ಸ್ಡೋರ್ಫ್ ತಿಳಿಸಿದ್ದಾರೆ.



Join Whatsapp