ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ವಿರೋಧಿಸಿ ಸಂಘಪರಿವಾರದಿಂದ ಸಾರ್ವಜನಿಕ ಸ್ಥಳದಲ್ಲಿ ಭಜನೆ, ಪೂಜೆ

Prasthutha|

ನವದೆಹಲಿ: ಗುರ್ಗಾಂವ್ ನ ಖಾಸಗಿ ಜಾಗದಲ್ಲಿ ಮುಸ್ಲಿಮರು ನಿರ್ವಹಿಸುತ್ತಿದ್ದ ಶುಕ್ರವಾರದ ನಮಾಝ್ ವಿರೋಧಿಸಿ ಸಂಘಪರಿವಾರ ಕಾರ್ಯಕರ್ತರು ಸಾರ್ವಜನಿಕವಾಗಿ ತೆರೆದ ಸ್ಥಳದಲ್ಲಿ ಭಜನೆ ಮತ್ತು ಪೂಜೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

- Advertisement -

ಗುರ್ಗಾಂವ್ ನ ಜಿಲ್ಲಾಡಳಿತ ಸೂಚಿಸಿದ 37 ಕಡೆ ಖಾಸಗಿ ಸ್ಥಳದಲ್ಲಿ ಮುಸ್ಲಿಮ್ ಸಮುದಾಯ ನಿರಂತರ 2 ವರ್ಷಗಳಿಂದ ನಮಾಝ್ ನಿರ್ವಹಿಸುತ್ತಾ ಬಂದಿದೆ. ಈ ಮಧ್ಯೆ ಕಳೆದ 2 ತಿಂಗಳಿನಿಂದ ಮುಸ್ಲಿಮರ ನಮಾಝ್ ಗೆ ವಿರೋಧ ವ್ಯಕ್ತಪಡಿಸಿ ಸಂಘಪರಿವಾರ ಪ್ರತಿಭಟನೆಯ ನೆಪದಲ್ಲಿ ದಾಂಧಲೆ ನಡೆಸಿತ್ತು.

ಸಂಘಪರಿವಾರದ ತೀವ್ರ ಪ್ರತಿಭಟನೆ ಮತ್ತು ಸ್ಥಳೀಯರ ಆಕ್ಷೇಪವನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತ 7 ಕಡೆ ನಮಾಝ್ ಗೆ ನೀಡಿದ ಅನುಮತಿಯನ್ನು ಹಿಂಪಡೆದಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

- Advertisement -

ಶುಕ್ರವಾರ ಮತ್ತೆ ಸಂಘಪರಿವಾರ, ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮ್ ಸಮುದಾಯದ ನಮಾಝ್ ಗೆ ವಿರೋಧ ವ್ಯಕ್ತಪಡಿಸಿದೆಯಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಭಜನೆ ಮತ್ತು ಪೂಜೆ ನೆರವೇರಿಸುತ್ತಿರುವಾಗ ಜಿಲ್ಲಾಡಳಿತ ಮೌನವಹಿಸಿದೆ.

Join Whatsapp