ನೋಟು ರದ್ದಾಗಿ ಐದು ವರ್ಷ, ಸಾರ್ವಜನಿಕರಲ್ಲಿ ಹಿಂದೆಂದಿಗಿಂತಲೂ ಹೆಚ್ಚಾದ ನಗದು

Prasthutha|

ನವದೆಹಲಿ: ನವೆಂಬರ್ 8, 2016ರಲ್ಲಿ ಏಕಾಏಕಿ ನೋಟು ರದ್ದು ಮಾಡಲಾಯಿತು. ನೋಟು ರದ್ದುಪಡಿಸಿ ಈಗ ಐದು ವರ್ಷವಾಗುತ್ತಿದೆ, ಅಂದಿನಿಂದಲೂ ಸಾರ್ವಜನಿಕರಲ್ಲಿ ನಗದು ಇಟ್ಟುಕೊಳ್ಳುವಿಕೆ ಹೆಚ್ಚುತ್ತ ಬಂದು ಇಂದು ಜನರ ಕೈಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ನಗದು ಹಣ ಜಮಾ ಆಗಿದೆ.

- Advertisement -


ಅಕ್ಟೋಬರ್ 8, 2021ನೇ ತಾರೀಕಿನ ಪಾಕ್ಷಿಕ ಲೆಕ್ಕಾಚಾರದಂತೆ 57.48 ಶೇಕಡಾ ಅಂದರೆ 28.30 ಲಕ್ಷ ಕೋಟಿ ರೂಪಾಯಿ ಭಾರತದ ಸಾರ್ವಜನಿಕರ ಕೈಯಲ್ಲಿದೆ. 2016ರ ನವೆಂಬರ್ 4ರಂದು ಭಾರತೀಯರೆಲ್ಲರ ಕೈಯಲ್ಲಿದ್ದ ನಗದು 17.97 ಲಕ್ಷ ಕೋಟಿ ರೂಪಾಯಿಗಳು. ಜನರ ಕೈಯ ನಗದು ನವೆಂಬರ್ 5, 2016ರಲ್ಲಿ ಇದ್ದ 9.11 ಲಕ್ಷ ಕೋಟಿಗೆ ಪರಿಗಣಿಸಿದರೆ 211 ಶೇಕಡಾ ಅಧಿಕವಾಗಿದೆ.


ಆರ್ ಬಿಐ- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದತ್ತಾಂಶದಂತೆ 2020ರ ಅಕ್ಟೋಬರ್ 23ರ ಪಾಕ್ಷಿಕದಲ್ಲಿ ದೀಪಾವಳಿಯ ಕಾರಣ ಜನರ ಕೈಗೆ ಅಧಿಕವಾಗಿ 15,582 ಕೋಟಿ ರೂಪಾಯಿ ಸೇರಿತ್ತು. ವಾರ್ಷಿಕ ಲೆಕ್ಕಾಚಾರದಂತೆ ಈ ವರ್ಷ ಅದು 8.5 ಶೇಕಡಾ ಹೆಚ್ಚಾಗಿದೆ ಎಂದರೆ 2.21 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

- Advertisement -

2016ರ ನವೆಂಬರ್ ನಲ್ಲಿ 500 ಮತ್ತು 1,000 ರೂಪಾಯಿ ನೋಟುಗಳನ್ನು ಹಿಂಪಡೆದಾಗ ಸಾರ್ವಜನಿಕರ ಕೈಯಲ್ಲಿ ನವೆಂಬರ್ 4, 2016ಕ್ಕೆ ಇದ್ದ ಹಣದ ಮೊತ್ತ 17.97 ಲಕ್ಷ ಕೋಟಿ ರೂಪಾಯಿಗಳು. 2017ರ ಜನವರಿ ಹೊತ್ತಿಗೆ 7.8 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿಕೆ ಆಗಿತ್ತು.


ಒಕ್ಕೂಟ ಸರಕಾರ ಮತ್ತು ಆರ್ ಬಿಐ ನಗದು ರಹಿತ ಸಮಾಜವನ್ನು ಎದುರು ನೋಡುತ್ತಿದ್ದರೆ ಜನರ ಕೈಯಲ್ಲಿ ನಗದು ನಿಧಾನವಾಗಿ ಹೆಚ್ಚಾಗುತ್ತಲೇ ಇದೆ. ಹಣ ನೀಡಲು ತಂದ ಡಿಜಿಟಲ್ ಪದ್ಧತಿ, ನಾನಾ ಹಂತದಲ್ಲಿ ಹಣ ಬಳಕೆಗೆ ತಂದ ನಿಯಂತ್ರಣಗಳು ಎಲ್ಲ ಇದ್ದರೂ ಜನರ ಕೈಯ ಕ್ಯಾಶ್ ಅಧಿಕವಾಗುತ್ತ ಸಾಗಿದೆ.

ಕೋವಿಡ್ ಸಾಂಕ್ರಾಮಿಕವು ಹರಡಿದಾಗ 2020ರಲ್ಲಿ ಸರಕಾರವು ಕಠಿಣವಾದ ಲಾಕ್ ಡೌನ್ ಜಾರಿಗೆ ತಂದಾಗ ಜನರು ನಗದು ಪಡೆಯಲು ಬ್ಯಾಂಕ್, ಎಟಿಎಂ ಮುಂದೆ ಮುಗಿ ಬಿದ್ದುದು ಕಂಡು ಬಂತು, ಅದಿನ್ನೂ ಕಡಿಮೆಯಾಗಿಲ್ಲ. ಜಗತ್ತಿನ ಎಲ್ಲ ಕಡೆ ಲಾಕ್ ಡೌನ್ ಘೋಷಣೆ ಆಗುತ್ತಿದ್ದಂತೆ ಭಾರತ ಕೂಡ ಫೆಬ್ರವರಿಯಲ್ಲಿ ಲಾಕ್ ಡೌನ್ ಸೂಚನೆ ನೀಡಿತು. ಕೂಡಲೆ ತಮ್ಮ ದಿನನಿತ್ಯದ ಜೀವನಾವಶ್ಯಕ ವಸ್ತುಗಳಿಗಾಗಿ ಜನರು ಬ್ಯಾಂಕಿನಿಂದ ಹಣ ಪಡೆದು ಕಿಸೆಯಲ್ಲಿ ಇಟ್ಟುಕೊಳ್ಳಲು ಆರಂಭಿಸಿದರು. ಲಾಕ್ ಡೌನ್ ಕಾಲದಲ್ಲಿ ಅಗತ್ಯಕ್ಕೆ ಹಣ ಕೊರತೆ ಬೀಳಬಾರದು ಎಂದು ಈ ಏರ್ಪಾಡು ಮಾಡಿಕೊಂಡರು.


ಆರ್ ಬಿಐ ವ್ಯಾಖ್ಯಾನದಂತೆ ಒಟ್ಟು ಮೊತ್ತ ಚಲಾವಣೆಯ ಹಣದಲ್ಲಿ ಬ್ಯಾಂಕುಗಳಿಂದ ಜನರು ಕಳೆದು ಪಡೆದುಕೊಳ್ಳುವ ಮೊತ್ತವೇ ಸಾರ್ವಜನಿಕರ ಕೈಯಲ್ಲಿನ ಹಣವಾಗಿದೆ. ಗ್ರಾಹಕರು ಮತ್ತು ಉದ್ಯಮಿಗಳ ನಡುವೆ ನೇರ ವ್ಯವಹಾರಕ್ಕಾಗಿ ಚಲಾವಣೆಯಲ್ಲಿ ಇರುವ ಮೊತ್ತವನ್ನು ಸಿಐಸಿ- ಚಲಾವಣೆಯಲ್ಲಿರುವ ನಗದು ಎನ್ನುತ್ತಾರೆ.


2016ರಲ್ಲಿ ದಿಢೀರನೆ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡಾಗ ಅದು ಆರ್ಥಿಕತೆಯನ್ನು ಸುತ್ತಾಡಿಸಿತು. ಬೇಡಿಕೆ ಕಡಿಮೆಯಾದುದು, ಸಮಸ್ಯೆಗೆ ಬಿದ್ದ ವ್ಯವಹಾರಗಳು, ಕುಸಿಯತೊಡಗಿದ ಅಂದರೆ 1.5% ಕುಸಿದ ಜಿಡಿಪಿ ಇತ್ಯಾದಿ ಸಂಗತಿಗಳು ಉದ್ಯಮಕ್ಕೆ ಹೊಡೆತ ನೀಡಿದವು. ಕೆಲವು ಸಣ್ಣ ಘಟಕಗಳು ಹೆಚ್ಚು ಬಾಧಿಸಲ್ಪಟ್ಟು ನೋಟು ರದ್ದತಿ ಬಳಿಕ ಮುಚ್ಚಿದವು. ಇದು ಹಣಕಾಸು ಸಂಬಂಧ ದ್ರವ್ಯ ಗುಣವನ್ನು ಕಡಿಮೆ ಮಾಡಿತು.


ಚಲಾವಣೆಯಲ್ಲಿ ಇರುವ ಹೆಚ್ಚಾಗಿರುವ ಹಣವು ನಿಜವಾಗಿ ಅತಿ ನಿಖರವಾದ ಸಂಖ್ಯೆಯೇನೂ ಅಲ್ಲ. “ಯಾವುದನ್ನು ಈಗ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದರೆ ಜಿಡಿಪಿ ಪ್ರಮಾಣ ನೋಟು ರದ್ದು ಆದ ಬಳಿಕ ಕಡಿಮೆ ಆಗಿದೆ, ಆಗುತ್ತ ಬಂದಿದೆ” ಎನ್ನುತ್ತಾರೆ ಬ್ಯಾಂಕರ್.
ಆರ್ಥಿಕ ವರ್ಷ 20ರವರೆಗೆ ಜಿಡಿಪಿ ಪ್ರಮಾಣದಲ್ಲಿ ನಗದು ಚಲಾವಣೆಯು 10ರಿಂದ 12 ಶೇಕಡಾ ಇತ್ತು. ಕೋವಿಡಾ 19 ಸಾಂಕ್ರಾಮಿಕದ ಬಳಿಕ, ಪರಿಸರದಲ್ಲಿ ಹೆಚ್ಚಾದ ನಗದು ಕಾರಣವಾಗಿ ಸಿಐಸಿಯಿಂದ ಜಿಡಿಪಿಗೆ ಆರ್ಥಿಕ ವರ್ಷ 25ಕ್ಕೆ 14 ಶೇಕಡಾಕ್ಕೆ ಏರಬಹುದು. ಆರ್ ಬಿಐ ದೃಷ್ಟಿಯಲ್ಲಿ, ಡಿಜಿಟಲ್ ಹಣ ನೀಡಿಕೆ ಸಿಐಸಿ ಮೇಲೆ ಯಾವ ಸಂಬಂಧಿತ ಪರಿಣಾಮ ಬೀರದು, ಸಿಐಸಿ ಸದಾ ಜಿಡಿಪಿ ಬೆಳವಣಿಯ ಹಾದಿಯಲ್ಲೇ ತನ್ನ ಪಥ ಗುರುತಿಸಿಕೊಳ್ಳುತ್ತದೆ.


ಇತ್ತೀಚಿನ ದಿನಗಳಲ್ಲಿ ಮೌಲ್ಯ ಮತ್ತು ಮೊತ್ತ ಎರಡರಂತೆಯೂ ಡಿಜಿಟಲ್ ಹಣ ಪಾವತಿ ಪ್ರಮಾಣ ಹೆಚ್ಚಾಗುತ್ತ ಬಂದಿದೆ. ಅದೇ ವೇಳೆ ಜಿಡಿಪಿ ಪ್ರಮಾಣದೊಡನೆ ಚಲಾವಣೆಯಲ್ಲಿರುವ ನಗದು ಪ್ರಮಾಣವೂ ಅಧಿಕವಾಗಿದೆ. ಇದು ಒಟ್ಟಾರೆ ಆರ್ಥಿಕ ಬೆಳವಣಿಗೆಯೊಡನೆ ಮೇಳವಿಸಿದೆ ಎಂದು ಡಿಜಿಟಲ್ ಪೇಮೆಂಟ್ ಬಗೆಗೆ ಅಧ್ಯಯನ ಮಾಡಿ ಆರ್ ಬಿಐ ಹೇಳಿದೆ.

ಸಿಎಂಎಸ್ ಇನ್ಫೋ ಸಿಸ್ಟಮ್ಸ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ರಾಜೀವ್ ಕೌಲ್ ಅವರು ಭಾರತದ ಎಲ್ಲ ಪ್ರದೇಶಗಳಲ್ಲಿ, ವಲಯಗಳಲ್ಲಿ, ಹಣಕಾಸು ಗುಂಪುಗಳಲ್ಲಿ ನಗದು ವ್ಯವಹಾರವೇ ಇಂದಿಗೂ ಪ್ರಾಮುಖ್ಯತೆ ಪಡೆದಿದೆ. ಆರ್ಥಿಕ ವರ್ಷ 21ರಲ್ಲಿ ಸಿಎಂಎಸ್ ನೆಟ್ ವರ್ಕ್ 9.15 ಲಕ್ಷ ಕೋಟಿಗೆ ಏರಿದೆ. 63,000 ಎಟಿಎಂಗಳು, 40,000 ರೀಟೇಲ್ ಮತ್ತು ಸಂಸ್ಥಾ ಸರಣಿಗಳಲ್ಲಿ ಈ ಹಣ ಓಡಾಡುವುದಾಗಿ ಅವರು ಹೇಳಿದರು.


ಹಬ್ಬದ ಕಾಲಗಳಲ್ಲಿ ನಗದು ಪಾವತಿಗೆ ಭಾರೀ ಬೇಡಿಕೆ ಇರುತ್ತದೆ. ವ್ಯಾಪಾರಿಗಳಿಂದ ಜನರವರೆಗೆ ಒಂದು ಕಡೆಯಿಂದ ಒಂದು ಕಡೆಗೆ ನಗದು ಚಲಾವಣೆಯು ಚುರುಕಾಗಿರುತ್ತದೆ. ಅಲ್ಲದೆ ಭಾರತದಲ್ಲಿ 15 ಕೋಟಿ ಜನರು ಬ್ಯಾಂಕ್ ಖಾತೆ ಹೊಂದಿಲ್ಲವಾದ್ದರಿಂದ ನಗದು ಹೊರತು ಬೇರೆ ವ್ಯವಹಾರವನ್ನು ಅವರು ಅರಿತವರಲ್ಲ. ನಾಲ್ಕನೇ ದರ್ಜೆಯ ನಗರಗಳಲ್ಲಿ 90 ಶೇಕಡಾ ವಾಣಿಜ್ಯ ವಹಿವಾಟು ನಗದಾಗಿ ನಡೆದರೆ ಒಂದನೇ ದರ್ಜೆಯ ನಗರಗಳಲ್ಲಿ ಈ ಪ್ರಮಾಣವು 50 ಶೇಕಡಾದಷ್ಟು ಇದೆ.


ಹಬ್ಬದ ಕಾಲದಲ್ಲಿ ನಗದನ್ನು ಜನರು ಹೆಚ್ಚು ಬಯಸುವುದು ಸಹಜವಾದರೂ 2018ರಿಂದ ಈ ಬಳಕೆ ಅಧಿಕವಾಗುತ್ತ ಸಾಗಿರುವುದನ್ನು ಸಿಎಂಎಸ್ ಸೂಚ್ಯಂಕದಿಂದ ತಿಳಿಯಬಹುದು. ಸಿಎಂಎಸ್ ಸೂಚ್ಯಂಕದಂತೆ ಕಳೆದ ಮೂರು ವರ್ಷಗಳಲ್ಲಿ ಸಿಎಂಎಸ್ ಹರಿವು 9 ಶೇಕಡಾದಿಂದ 19 ಶೇಕಡಾಕ್ಕೆ ಜಿಗಿದಿದೆ.
(ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್. ಕಾಮ್)

Join Whatsapp