ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕರೆ ನೀಡಿದ ರೈತ ಸಂಘಟನೆಗಳು

Prasthutha|


►ಯಾರನ್ನೂ ಗೆಲ್ಲಿಸುವುದಲ್ಲ, ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ!

- Advertisement -

ಹೊಸದಿಲ್ಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನೇತೃತ್ವದ ರೈತ ಸಂಘಟನೆಗಳು ಮತದಾರರಿಗೆ ಕರೆ ನೀಡಿದೆ.

ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತರಿಗೆ ನ್ಯಾಯ ಕೊಡಿಸದ ಬಿಜೆಪಿಯನ್ನು ‘ಶಿಕ್ಷಿಸಿ’ ಎಂದು ರೈತ ನಾಯಕರು ಜನತೆಗೆ ಮನವಿ ಮಾಡಿದ್ದಾರೆ.
“ರೈತರ ನ್ಯಾಯಸಮ್ಮತ ಬೇಡಿಕೆಗಳನ್ನೂ ಕಡೆಗಣಿಸಿ ಬಿಜೆಪಿ ಸರಕಾರ ರೈತರಿಗೆ ದ್ರೋಹ ಬಗೆದಿದೆ. ಇದರಿಂದಾಗಿ ಬಿಜೆಪಿಯನ್ನು ಸೋಲಿಸಲು 57 ವಿವಿಧ ರೈತ ಸಂಘಟನೆಗಳು ಮುಂದೆ ಬಂದಿದೆ. ಯಾವುದೇ ಪಕ್ಷವನ್ನು ಗೆಲ್ಲಿಸುವುದಲ್ಲ, ಬಿಜೆಪಿಯನ್ನು ಸೋಲಿಸುವುದಾಗಿದೆ ನಮ್ಮ ಗುರಿ” ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

Join Whatsapp