NEET PG ಪರೀಕ್ಷೆ 2022 । ಸುಪ್ರೀಂ ಕೋರ್ಟ್ ವಿಚಾರಣೆಯ ಮುನ್ನ ಮುಂದೂಡಿದ ಪ್ರಾಧಿಕಾರ

Prasthutha|

ನವದೆಹಲಿ: NEET PG 2021 ಕೌನ್ಸಿಲಿಂಗ್ ನೊಂದಿಗೆ ಘರ್ಷಣೆಯಿಂದಾಗಿ NEET PG ಪರೀಕ್ಷೆ 2022ಯನ್ನು 6-8 ವಾರಗಳವರೆಗೆ ಮುಂದೂಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಪರೀಕ್ಷಾ ಮಂಡಳಿಯನ್ನು ವಿನಂತಿಸಿದೆ. ಸುಪ್ರೀಂ ಕೋರ್ಟ್ ನ ವಿಚಾರಣೆಯ ಮುನ್ನ ಪ್ರಾಧಿಕಾರದ ಈ ನಿಲುವು ಸಾಕಷ್ಟು ಸಂಚಲನ ಮೂಡಿಸಿದೆ.

- Advertisement -

ಜನವರಿ 25 ರಂದು 6 ಎಂ.ಬಿ.ಬಿ.ಎಸ್ ಪದವೀಧರರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ಮಾರ್ಚ್ 12 ರಂದು ನಿಗಧಿಯಾಗಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ಮುಂದೂಡುವಂತೆ ಕೋರಿದ್ದರು. ಕಡ್ಡಾಯ ಇಂಟರ್ನ್ ಶಿಪ್ ಅವಧಿಯನ್ನು ಪೂರ್ಣಗೊಳಿಸದ ಕಾರಣ ಅನೇಕ ಪದವೀಧರರು ಪರೀಕ್ಷೆಯನ್ನು ಬರೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಹಾಯಕ ಮಹಾ ನಿರ್ದೇಶಕರಾದ ಡಾ. ಬಿ. ಶ್ರೀನಿವಾಸ್ ಮತ್ತು ವೈದ್ಯಕೀಯ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ NEET PG 2021 ಕೌನ್ಸೆಲಿಂಗ್‌ನೊಂದಿಗೆ ಘರ್ಷಣೆಯಾಗುತ್ತಿರುವುದರಿಂದ NEET-PG 2022 ಪರೀಕ್ಷೆಯನ್ನು ಮುಂದೂಡಲು ವೈದ್ಯರಿಂದ ಸಾಕಷ್ಟು ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗುತ್ತಿದೆ ಎಂದು NBE ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಎಂ ಬಾಜ್‌ಪೈ ಅವರಿಗೆ ಕಳುಹಿಸಲಾದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

- Advertisement -

ಈ ಮೇಲಿನ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ NEET PG 2022 ಅನ್ನು 6-8 ವಾರಗಳವರೆಗೆ ಮುಂಡೂಡುವ ನಿರ್ಧಾರವನ್ನು ತೆಗೆದುಕೊಂಡಿದೆ.

Join Whatsapp