ಕರಾವಳಿಯಿಂದ ಬೆಳಗಾವಿಗೂ ವ್ಯಾಪಿಸಿದ ಕೇಸರಿ ಶಾಲು ವಿವಾದ !

Prasthutha|

ಬೆಳಗಾವಿ: ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದಕ್ಕೆ ,  ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದಿದೆ.

- Advertisement -

ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೂಡಲೇ ಕೇಸರಿ ಶಾಲು ತೆಗಸಿ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ಜೊತೆಗೆ ಕಾಲೇಜಿಗೆ ಸಂಬಂಧ ಇಲ್ಲದ ಯುವಕರು ಬಂದು ಈ ರೀತಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು. ಮುಂದಿನ ಸಾರಿ ಕಾಲೇಜಿಗೆ ಬಾರದಂತೆ ಯುವಕರಿಗೆ ಪಿಎಸ್ ಐ ವಾರ್ನಿಂಗ್ ನೀಡಿದ್ದಾರೆ.

ಉಡುಪಿ, ಕುಂದಾಪುರ, ಭದ್ರಾವತಿ, ಚಿಕ್ಕಮಗಳೂರಿನ ಕೊಪ್ಪ ಕಾಲೇಜಿನಲ್ಲಿ  ನಡೆಯುತ್ತಿದ್ದ ಕೇಸರಿ ಶಾಲು ವಿವಾದ ದೂರದ ಬೆಳಗಾವಿಗೂ ವ್ಯಾಪಿಸಿದೆ.

Join Whatsapp