ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ವೇಳೆ ಗುಂಡಿನ ದಾಳಿ: ಕನಿಷ್ಠ 6 ಮಂದಿ ಸಾವು; 36 ಜನರಿಗೆ ಗಾಯ

Prasthutha|

ಚಿಕಾಗೋ: ಅಮೆರಿಕಾದ ಚಿಕಾಗೋ ನಗರದ ಸಮೀಪ ಸ್ವಾತಂತ್ರ್ಯ ದಿನಾಚರಣೆಯ ಪರೇಡ್’ನಲ್ಲಿ ಧ್ವಜಗಳನ್ನು ಬೀಸುತ್ತಿದ್ದ ಕುಟುಂಬ ಮತ್ತು ಸೈಕಲ್ ಸವಾರಿ ನಡೆಸುತ್ತಿದ್ದ ಮಕ್ಕಳ ಮೇಲೆ ಛಾವಣಿಯ ಮೇಲೆ ಕುಳಿತಿದ್ದ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಘಟನೆಯಲ್ಲಿ ಸುಮಾರು 36 ಜನರು ಗಾಯಗೊಂಡಿದ್ದಾರೆ.

- Advertisement -

ಚಿಕಾಗೋದಿಂದ ಉತ್ತರಕ್ಕೆ 40 ಕಿಮೀ ದೂರದಲ್ಲಿರುವ 30 ಸಾವಿರ ಜನರ ಮೇಲೆ ಹೈಲ್ಯಾಂಡ್ ಪಾರ್ಕ್’ನಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಪೋಷಕರು ಸೇರಿದಂತೆ ಮೆರವಣಿಗೆಯಲ್ಲಿ ಭಾಗವಹಿಸಿದ ನೂರಾರು ಮಂದಿ ಸ್ಥಳದಿಂದ ಓಡಿ ಹೋಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಬರ್ಟ್ ಇ ಕ್ರಿಮೋ III ಎಂಬಾತನನ್ನು ಗಂಟೆಗಳ ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp