ಸಿಸ್ಟರ್ ಅಭಯಾ ಕೊಲೆ ಪ್ರಕರಣ: ಅಪರಾಧಿಗಳಿಗೆ ಷರತ್ತುಗಳೊಂದಿಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್

Prasthutha|

ತಿರುವನಂತಪುರಂ: ಸಿಸ್ಟರ್ ಅಭಯಾ ಕೊಲೆ ಪ್ರಕರಣದ ಅಪರಾಧಿಗಳಾದ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಅವರಿಗೆ ಕೇರಳ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.

- Advertisement -

ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಸಿ.ಜಯಚಂದ್ರನ್ ಅವರು ತಲಾ 5 ಲಕ್ಷ ರೂ.ಗಳು ಮತ್ತು ಇಬ್ಬರು ಶ್ಯೂರಿಟಿಗಳ ಷರತ್ತು ವಿಧಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಆರು ತಿಂಗಳ ಕಾಲ ತನಿಖಾಧಿಕಾರಿಯ ಮುಂದೆ ಎಲ್ಲಾ ಶನಿವಾರಗಳಲ್ಲಿ ಹಾಜರಾಗುವಂತೆ ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ರಾಜ್ಯವನ್ನು ತೊರೆಯಬಾರದು ಎಂದು ನ್ಯಾಯಾಲಯವು ಇಬ್ಬರಿಗೂ ನಿರ್ದೇಶನ ನೀಡಿತು.

1992ರ ಮಾರ್ಚ್ 27ರಂದು ಕೊಟ್ಟಾಯಂನ ಸೇಂಟ್ ಪಿಯಸ್ ಎಕ್ಸ್ ಕಾನ್ವೆಂಟ್ ನ ಬಾವಿಯೊಂದರಲ್ಲಿ 20 ವರ್ಷದ ಕ್ಯಾಥೋಲಿಕ್ ಸಿಸ್ಟರ್ ಅಭಯಾ ಶವವಾಗಿ ಪತ್ತೆಯಾಗಿದ್ದಳು. ಡಿಸೆಂಬರ್ 23, 2021 ರಂದು ಸಿಬಿಐ ನ್ಯಾಯಾಲಯವು ಅಪರಾಧಿಗಳಾದ ಫಾದರ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಅವರಿಗೆ 28 ವರ್ಷಗಳ ಕಾನೂನು ವಿಚಾರಣೆಯ ನಂತರ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಮಾರು ಮೂರು ದಶಕಗಳ ಅವಧಿಯಲ್ಲಿ ಈ ಪ್ರಕರಣವನ್ನು 16 ತಂಡಗಳು ತನಿಖೆ ನಡೆಸಿದ್ದವು.

Join Whatsapp