ತಮಗೆ ಸಿಕ್ಕಿದ್ದ 700 ಕೆಜಿ ಬೆಳ್ಳಿಯ ಉಡುಗೊರೆಗಳನ್ನು ಮಲೆಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀಡಿದ ಸಿದ್ದರಾಮಯ್ಯ

Prasthutha|

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಸಿಕ್ಕಿದ್ದ 700 ಕೆಜಿ ಬೆಳ್ಳಿಯ ಉಡುಗೊರೆಗಳನ್ನು ಮಲೆಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀಡಿದ್ದಾರೆ.

- Advertisement -

ಸಭೆ, ಸಮಾರಂಭಗಳಲ್ಲಿ ಉಡುಗೊರೆಯಾಗಿ ಬಂದಿದ್ದ ಬೆಳ್ಳಿಯ ಗದೆ, ಕತ್ತಿ ಮುಂತಾದ ವಸ್ತುಗಳು ಸೇರಿದಂತೆ ಒಟ್ಟು 700 ಕೆಜಿಯಷ್ಟು ಬೆಳ್ಳಿಯನ್ನು ಮಲೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಸಿಎಂ ನೀಡಿದ್ದಾರೆ.

ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ಈ ಮಾಹಿತಿ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ಯಾವುದನ್ನು ಹೇಳಿಕೊಳ್ಳಲಿಲ್ಲ. ಅವರದ್ದು ಪ್ರಚಾರದ ಭಕ್ತಿಯಲ್ಲ ಎಂದಿದ್ದಾರೆ.

- Advertisement -

ಭಕ್ತಿಯನ್ನು ಬೀದಿಯಲ್ಲಿ ತೋರಿಸುವುದಲ್ಲ. ಆತ್ಮದಲ್ಲಿ ತೋರಿಸಬೇಕು. ನಾವು ಕೂಡ ರಾಮ ರಾಮ ಎನ್ನುವ ಮಂತ್ರವನ್ನು ಪಠಿಸುತ್ತಾ ಸೀತಾರಾಮನಿಗೆ ಕೈ ಮುಗಿಯುತ್ತೇವೆ ಎಂದರು.

ಜೈ ಶ್ರೀರಾಮ್ ಎಂದು ಆಕ್ರೋಶದಿಂದ ಕೂಗುವುದಿಲ್ಲ. ನಮ್ಮದು ತಾರತಮ್ಯ ಇಲ್ಲದ ಆಡಳಿತವಾಗಿದೆ. ಟಿಕೆಟ್ ಹಂಚಿಕೆಯಲ್ಲೂ ಎಲ್ಲಾ ವರ್ಗಕ್ಕೂ ಸಮಾನತೆ ನೀಡಲಾಗಿದೆ ಎಂದು ಹೆಚ್.ಪಿ ಮಂಜುನಾಥ್ ತಿಳಿಸಿದರು.



Join Whatsapp