ನಾನು ಶಿಕ್ಷಣ ಸಚಿವನಾಗಿ ಮುಂದುವರೆದಿದ್ದರೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ನೀತಿ ತರುತ್ತಿದ್ದೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ

Prasthutha|

ಚಾಮರಾಜನಗರ: ನಾನು ಇನ್ನೂ ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ತೆರೆದ ಪುಸ್ತಕ ಪರೀಕ್ಷೆ ನೀತಿಯನ್ನು ಜಾರಿಗೆ ತರುತ್ತಿದ್ದೆ. ಅವರು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ. ಇಲ್ಲ ಎಂದರೆ ಎಲ್ಲಿ ಬರೆಯುತ್ತಾರೆ? ಅದಕ್ಕೆ ಸಿಸಿ ಕ್ಯಾಮರಾ ಬೇಕಿರಲಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದ್ದಾರೆ

- Advertisement -

ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಕಣ್ಗಾವಲು ಏಕೆ? ವಿದ್ಯಾರ್ಥಿಗಳು ಏನು ಕಳ್ಳರೇ, ಪರೀಕ್ಷೆ ಬರೆಯುವುದಕ್ಕೆ ಭಯ ಪಡಿಸುತ್ತಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಹೇಳಿದ್ದಾರೆ.

- Advertisement -

15-16 ವರ್ಷದ ಮಕ್ಕಳು ಕಷ್ಟಪಟ್ಟು ಓದಿಕೊಂಡು ಬಂದಿರುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಲಾಗಿದೆ. ಒಂದು ವೇಳೆ ಕಾಪಿ ಹೊಡೆದರೆ ಏನು ತಪ್ಪು, ಅದು ಮಹಾ ಅಪರಾಧವೇ ಎಂದು ಅವರು ಕೇಳಿದ್ದಾರೆ.



Join Whatsapp