ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ಅಫ್ತಾಬ್ ಕೃತ್ಯವನ್ನು ಸಮರ್ಥಿಸಿದಾತ ರಶೀದ್ ಖಾನ್ ಅಲ್ಲ, ವಿಕಾಸ್

Prasthutha|

ಲಕ್ನೋ: ಶ್ರದ್ಧಾ ವಾಕರ್ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದ ಅಫ್ತಾಬ್’ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶ ಬುಲಂದ್ ಶಹರ್ ಪೊಲೀಸರು ಬಂಧಿಸಿದ್ದಾರೆ.

- Advertisement -

ಶ್ರದ್ಧಾ ವಾಕರ್ ಹತ್ಯೆ ಬಹಿರಂಗವಾದ ಬೆನ್ನಲ್ಲೇ ತನ್ನನ್ನು ಮುಸ್ಲಿಂ ಎಂಬಂತೆ ಗುರುತಿಸಿಕೊಂಡಿದ್ದ ಯುವಕನೊಬ್ಬ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ವೀಡಿಯೊವೊಂದು ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಬಂಧಿತ ವ್ಯಕ್ತಿಯನ್ನು ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ.ಆದರೆ ಆತ ವೈರಲ್ ಮಾಡಿದ್ದ ವಿಡಿಯೊದಲ್ಲಿ ತನ್ನನ್ನು ಬುಲಂದ್’ಶಹರ್ ನಿವಾಸಿ ರಶೀದ್ ಖಾನ್ ಎಂದು ಸುಳ್ಳು ಹೇಳಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಕೋಪದ ಭರದಲ್ಲಿ ಹಲವಾರು ತುಂಡುಗಳಾಗಿ ಕತ್ತರಿಸುವುದು ತಪ್ಪೇನಲ್ಲ. ಶ್ರದ್ಧಾ ಮತ್ತು ಆಫ್ತಾಬ್ ಇಬ್ಬರೂ ತಮ್ಮ ಸಂಬಂಧದಲ್ಲಿ ತಪ್ಪು ಮಾಡಿರಬೇಕು” ಎಂದು ಹೇಳುವ ಮೂಲಕ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ

ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ವಿಡಿಯೊದಲ್ಲಿ ರಶೀದ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾನೆ. ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಲಾಗಿತ್ತು. ಇದೀಗ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ವಿಡಿಯೋವನ್ನು ದೆಹಲಿಯಲ್ಲಿ ಚಿತ್ರೀಕರಿಸಲಾಗಿದೆ ಆತನ ಹೆಸರು ವಿಕಾಸ್ ಎಂದು ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್. ಕುಮಾರ್ ತಿಳಿಸಿದ್ದಾರೆ.

Join Whatsapp