ಆನೆ ದಾಳಿಯನ್ನು ನಿಯಂತ್ರಿಸಲಾಗದ ಅರಣ್ಯ ಇಲಾಖೆ; ಆಕ್ರೋಶಿತ ಸಾರ್ವಜನಿಕರಿಂದ ಫಾರೆಸ್ಟ್‌ ಆಫೀಸ್ ಧ್ವಂಸ

Prasthutha|

ಮೂಡಿಗೆರೆ: ಆನೆ ದಾಳಿಯನ್ನು ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷಗೊಂಡ  ಸಾರ್ವಜನಿಕರು ಫಾರೆಸ್ಟ್‌ ಆಫೀಸನ್ನು ಧ್ವಂಸಗೈದ ಘಟನೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

- Advertisement -

ನಾಲ್ಕು ದಿನದ ಹಿಂದೆ ಆನೆ ದಾಳಿಗೆ ಬಲಿಯಾಗಿ 35 ವರ್ಷದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ನಿರಂತರ ಆನೆ ದಾಳಿಯಿಂದ ಕಂಗೆಟ್ಟಿರುವ ಮಲೆನಾಡಿಗರು ಕಳ್ಳ ಬೇಟೆ ನಿಗ್ರಹ ಶಿಬಿರವನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ  ಆಕ್ರೋಶಗೊಂಡ ಜನರು, ‘ ನಿಮಗೆ ಆನೆ ನಿಯಂತ್ರಿಸಲಿಕ್ಕೆ ಆಗಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ ಬೇಕು, ನಿಮಗೆ  ಒಂದು ಪಟಾಕಿ ಕೊಡುವ ಯೋಗ್ಯತೆ ಇಲ್ಲ  ಎಂದು ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಹುಡಿ ಮಾಡಿದ್ದಾರೆ.  

Join Whatsapp