2‌019ರಲ್ಲೇ ನಿಧಾನವಾಗಿ ಕಾರು ಚಲಾಯಿಸುವಂತೆ ರಿಷಭ್‌ ಪಂತ್‌ಗೆ ಸಲಹೆ ನೀಡಿದ್ದ ಶಿಖರ್‌ ಧವನ್‌!

Prasthutha|

ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಕಾರು ಅಫಘಾತದ ಸುದ್ದಿ ಶುಕ್ರವಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಪ್ರಧಾನಿ ಮೋದಿ, ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ಎಂಎಸ್‌ ಧೋನಿ ಸೇರಿದಂತೆ ಹಲವು ಹಿರಿಯ-ಕಿರಿಯ ಕ್ರಿಕೆಟಿಗರು ಪಂತ್‌ ಆರೋಗ್ಯದಲ್ಲಿ ಚೇತರಿಕೆ ಕಾಣುವಂತಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

- Advertisement -

ಈ ನಡುವೆ ರಿಷಭ್‌ ಪಂತ್‌ ಮತ್ತು ಟೀಮ ಇಂಡಿಯಾದ ಹಿರಿಯ ಆಟಗಾರ ಶಿಖರ್‌ ಧವನ್‌ ನಡುವಿನ ಮಾತುಕತೆಯ ತುಣಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 2019ರಲ್ಲಿ ಪಂತ್‌ ಮತ್ತು ಧವನ್‌ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಭಾಗವಾಗಿದ್ದರು. ಈ ವೇಳೆ ಧವನ್‌ ಜೊತೆ ಮಾತುಕತೆಯಲ್ಲಿ ತೊಡಗಿದ್ದ ಪಂತ್‌, ನನಗೆ ನೀವು ಸಲಹೆಯೊಂದನ್ನು ಕೊಡುವುರಾದರೆ ಏನು ಹೇಳ ಬಯಸುತ್ತೀರಿ ಎಂದು ಪ್ರಶಸ್ನಿಸುತ್ತಾರೆ. ಇದಕ್ಕೆ ಧವನ್‌, ನಿಧಾನವಾಗಿ ವಾಹನ ಚಲಾಯಿಸು ಎಂದು ಧವನ್‌ ಉತ್ತರಿಸುತ್ತಾರೆ. ಈ ವೇಳೆ ಇಬ್ಬರು ಆಟಗಾರರು ಜೋರಾಗಿ ನಗಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ, ನಿಮ್ಮ ಸಲಹೆ ಯನ್ನು ನಾನು ಸ್ವೀಕರಿಸಿದ್ದೇನೆ, ಇನ್ನು ಮುಂದೆ ನಿಧಾನವಾಗಿ ವಾಹನ ಚಲಾಯಿಸುತ್ತೇನೆ ಎಂದು ಪಂತ್‌ ಉತ್ತರಿಸಿದ್ದಾರೆ.

ದೆಹಲಿಯಿಂದ ರೂರ್ಕಿಯಲ್ಲಿರುವ ಮನೆಗೆ ಮರಳುತ್ತಿದ್ದ ವೇಳೆ, ಶುಕ್ರವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ, ಟೀಮ್‌ ಇಂಡಿಯಾದ ಸ್ಟಾರ್‌ ವಿಕೆಟ್‌ ರಿಷಭ್‌ ಪಂತ್‌ ತೀವ್ರವಾಗಿ ಗಾಯಗೊಂಡಿದ್ದರು. . ರಿಷಭ್‌ ಅತಿವೇಗವಾಗಿ ಚಲಾಯಿಸುತ್ತಿದ್ದ ಮರ್ಸಿಡಿಸ್- ಎಂಎಮ್‌ಜಿ ಜಿಎಲ್‌ಇ ಕೂಪೆ ಕಾರು, ಡೆಹ್ರಾಡೂನ್‌ನಿಂದ 90 ಕಿಮೀ ದೂರದಲ್ಲಿರುವ ಹರಿದ್ವಾರ ಜಿಲ್ಲೆಯ ನರ್ಸನ್‌ ಎಂಬಲ್ಲಿ ನಿಯಂತ್ರಣ ತಪ್ಪಿ  ಡಿವೈಡರ್‌ಗಳಿಗೆ ಡಿಕ್ಕಿ ಹೊಡೆದು, ಬಳಿಕ ಹೊತ್ತಿ ಉರಿದಿತ್ತು.  

- Advertisement -

ಅಪಘಾತದಲ್ಲಿ ಪಂತ್‌ ಹಣೆ, ಮೊಣಕಾಲಿನ ಅಸ್ಥಿರಜ್ಜು,  ಮಣಿಕಟ್ಟು, ಕಾಲು ಮತ್ತು ಬೆನ್ನಿಗೆ ಬಲವಾದ ಗಾಯಗಳಾಗಿವೆ. ಮುಂಜಾನೆ 5.30 ರ ವೇಳೆಗೆ ಘಟನೆ ನಡೆದಿದ್ದು, ಚಾಲನೆಯ ವೇಳೆ ತಾನು ನಿದ್ರೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎಂದು ಪಂತ್‌ ಪೊಲೀಸರಿಗೆ ತಿಳಿಸಿದ್ದಾರೆ. ಡಿವೈಡರ್‌ಗೆ ಢಿಕ್ಕಿ ಹೊಡೆದ ಕಾರು ಹಲವು ಬಾರಿ ಪಲ್ಟಿಯಾಗಿ ನಿಂತ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಹಿಂಭಾಗದ ಗಾಜನ್ನು ಒಡೆದು ಪಂತ್‌, ಕಾರಿನಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

Join Whatsapp