ಕೊಚ್ಚಿ : ಕೋವಿಡ್ 19 ಸೋಂಕಿನ ಭೀತಿ ಇನ್ನೂ ಕಡಿಮೆಯಾಗದಿರುವ ನಡುವೆಯೇ, ಇದೀಗ ಕೇರಳದ ಕೋಯಿಕ್ಕೋಡ್ ನಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆಯಾಗಿದೆ. ಶಿಗೆಲ್ಲಾ ಸೋಂಕಿನ ಕನಿಷ್ಠ ಆರು ಪ್ರಕರಣಗಳು ಖಚಿತವಾಗಿದ್ದು, ಒಂದು ಮಗು ಸಾವಿಗೀಡಾಗಿದೆ.
ಇನ್ನೂ 20 ಶಂಕಿತ ಪ್ರಕರಣ ವರದಿಯಾಗಿದ್ದು, ಇವರಲ್ಲಿ ಹೆಚ್ಚಿನವರು ಮಕ್ಕಳೇ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಶಿಗೆಲ್ಲಾ ಬ್ಯಾಕ್ಟಿರಿಯಾ ಸೋಂಕಿನ ಪರಿಣಾಮ 11 ವರ್ಷದ ಮಗು ಪ್ರಾಣ ಕಳೆದುಕೊಂಡಿದೆ.
ಅತಿಸಾರ, ಹೊಟ್ಟೆ ನೋವು, ಜ್ವರ ಈ ಸೋಂಕಿನ ಲಕ್ಷಣವಾಗಿದ್ದು, ಶಿಗೆಲ್ಲಾ ಎಂಬ ಬ್ಯಾಕ್ಟಿರಿಯಾದಿಂದ ಇದು ಹರಡುತ್ತದೆ ಎನ್ನಲಾಗಿದೆ. ಮೂರು ದಿನಕ್ಕಿಂತ ಹೆಚ್ಚು ದಿನ ಅತಿಸಾರ, ಜ್ವರ, ಇತರ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಕಲುಷಿತ ನೀರು, ಆಹಾರದ ಮೂಲಕ ಇದು ಹರಡಲ್ಪಡುತ್ತದೆ ಎನ್ನಲಾಗಿದೆ.