ಕಂಗನಾ ರಣಾವತ್ ವಿರುದ್ಧ ಜಾವೇದ್ ಅಖ್ತರ್ ರ ಮಾನಹಾನಿ ದೂರು : ತನಿಖೆಗೆ ಕೋರ್ಟ್ ಆದೇಶ

Prasthutha|

ಮುಂಬೈ : ಟಿವಿ ಸಂದರ್ಶನವೊಂದರಲ್ಲಿ ತನ್ನ ವಿರುದ್ಧ ಮಾನಹಾನಿಕಾರಿ ಹೇಳಿಕೆ ನೀಡಿದ್ದಾರೆ ಎಂದು ನಟಿ ಕಂಗನಾ ರಣಾವತ್ ವಿರುದ್ಧ ಬಾಲಿವುಡ್ ನ ಜನಪ್ರಿಯ ಗೀತರಚನೆಕಾರ ಜಾವೇದ್ ಅಖ್ತರ್ ದೂರಿನ ಬಗ್ಗೆ ವಿಚಾರಣೆ ನಡೆಸುವಂತೆ ಮುಂಬೈಯ ನ್ಯಾಯಾಲಯವೊಂದು ಪೊಲೀಸರಿಗೆ ಆದೇಶಿಸಿದೆ.

ಅಂಧೇರಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರ ಬಳಿ ಕಳೆದ ತಿಂಗಳು ದೂರು ದಾಖಲಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಜಾವೇದ್ ಅಖ್ತರ್ ಹೆಸರನ್ನು ನಟಿ ಕಂಗನಾ ರಣಾವತ್ ಅನಾವಶ್ಯಕವಾಗಿ ಎಳೆತಂದಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

ರಣಾವತ್ ಹೇಳಿಕೆಯಿಂದಾಗಿ ಜಾವೇದ್ ಅಖ್ತರ್ ಅವರಿಗೆ ದ್ವೇಷ ಮೆಸೇಜ್ ಗಳು ಬರುತ್ತಿವೆ. ಇದು ಅವರ ಘನತೆಗೆ ಧಕ್ಕೆಯುಂಟು ಮಾಡುತ್ತದೆ. ಹೀಗಾಗಿ ನಟಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರ ನ್ಯಾಯವಾದಿ ನ್ಯಾಯಾಲಯಕ್ಕೆ ಮನವರಿಕೆ ನೀಡಿದ್ದಾರೆ.

- Advertisement -