ಹೊಸದಿಲ್ಲಿ: ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಯನ್ನು ವೈಭವೀಕರಿಸುವುದು ದೇಶಕ್ಕೆ ಮಾಡುವ ಅವಮಾನ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿ ಕಾರಿದ್ದಾರೆ.
‘ಗೋಡ್ಸೆ ಜಿಂದಾಬಾದ್’ ಎಂದು ಟ್ವೀಟ್ ಮಾಡಿದವರು ಮತ್ತು ಅದನ್ನು ಹಂಚಿಕೊಂಡು ಗೋಡ್ಸೆ ಪರ ಬರಹಗಳನ್ನು ಬರೆಯುವರ ವಿರುದ್ಧ ವರುಣ್ ಗಾಂಧಿ ಆಕ್ರೋಶ ಹೊರ ಹಾಕಿದರು.
‘ಭಾರತ ದೇಶ ಎಂದಿನಿಂದಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಮಹಾತ್ಮ ಗಾಂಧೀಜಿ ಆಧ್ಯಾತ್ಮಿಕ ಆಧಾರಗಳನ್ನು ತನ್ನ ಅಸ್ತಿತ್ವದ ಮೂಲಕ ಅಭಿವ್ಯಕ್ತಗೊಳಿಸಿ ನಮಗೆ ನೈತಿಕ ಅಧಿಕಾರವನ್ನು ನೀಡಿದ್ದರು ಅದು ಇಂದಿಗೂ ದೊಡ್ಡ ಶಕ್ತಿಯಾಗಿ ನಮ್ಮೊಂದಿಗೆ ಉಳಿದಿದೆ’ ಎಂದಿದ್ದಾರೆ.