ಹಸುವಿನೊಂದಿಗೆ ಲೈಂಗಿಕ ಕ್ರಿಯೆ; ವಿಕೃತ ಕಾಮಿಯ ಬಂಧನ

Prasthutha|

ಬೆಂಗಳೂರು: ಮೇಯಲು ಕಟ್ಟಿ ಹಾಕಿದ್ದ ಹಸುವಿನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದ ವಿಕೃತ ಕಾಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಮದ್ದೂರು ಮೂಲದ ಮಂಜುನಾಥ್(34)   ಚಂದ್ರಾಲೇಔಟ್ ಪೊಲೀಸರಿಂದ ಬಂಧನಕ್ಕೊಳಗಾದ ವಿಕೃತ ಕಾಮಿ.

ಶಶಿಕುಮಾರ್ ಎಂಬವರ ದೂರಿನ ಮೇರೆಗೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ನಾಯಂಡಹಳ್ಳಿ ಬಳಿ ಹೈನುಗಾರಿಕೆ ನಡೆಸುತ್ತಿರುವ  ಶಶಿಕುಮಾರ್ ಸಮೀಪದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತನ್ನ ಹಸುಗಳನ್ನು ಮೇಯಲು ಕಟ್ಟುತ್ತಿದ್ದರು.

- Advertisement -

ಹಸುವಿನ ಬಳಿ ಯಾರೂ ಇಲ್ಲದ ಸಮಯ ನೋಡಿ ಬರುತ್ತಿದ್ದ ಮಂಜುನಾಥ, ಹಸುವಿನ ಬಾಲವನ್ನು  ಕತ್ತರಿಸಿ ಹಿಂಸೆ ನೀಡುತ್ತಿದ್ದ. ಅಲ್ಲದೇ ಹಸುವಿನ ಕೆಚ್ಚಲಿಗೆ ಬಾಯಿ ಹಾಕುತ್ತಿದ್ದುದಲ್ಲದೇ,ಹಸುವನ್ನು ಪೊದೆಯೊಳಗೆ ಕೊಂಡೊಯ್ದು ಬೆತ್ತಲಾಗಿ ತನ್ನ ಕಾಮ ತೃಷೆ ತೀರಿಸಲು ಯತ್ನಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Join Whatsapp