ಕಾರು ಅಪಘಾತ: ಒಂದೇ ಕುಟುಂಬದ ಮೂವರ ಸಾವು

Prasthutha|

ಹುಬ್ಬಳ್ಳಿ: ಸಂಬಂಧಿಕರ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಸ್ವ ಗೃಹಕ್ಕೆ ಮರಳುವ ವೇಳೆಯಲ್ಲಿ, ಕಾರೊಂದು ಅಪಘಾತಕ್ಕೀಡಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ  ಸಾವನಪ್ಪಿರುವ ಘಟನೆ ಹುಬ್ಬಳ್ಳಿಯ ಜಿಗಳೂರು ಗ್ರಾಮದ ಬಳಿ ನಡೆದಿದೆ.

- Advertisement -

ಹುಬ್ಬಳ್ಳಿಯ ನವನಗರ ನಿವಾಸಿಗಳಾದ ಹನಮಂತಪ್ಪ ಬೇವಿನಕಟ್ಟಿ, ಪತ್ನಿ ರೇಣುಕಾ ಬೇವಿನಕಟ್ಟಿ, ಅಳಿಯ ರವೀಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ರವೀಂದ್ರ ಅವರ ಪತ್ನಿ ಅರುಂಧತಿಯವರಿಗೂ ಗಂಭೀರವಾದ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ದಿನ ಬೆಂಗಳೂರಿನ ಸಂಬಂಧಿಗಳ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬ ಸಮೇತರಾಗಿ ತಡ ರಾತ್ರಿ ನವನಗರದ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಈ ವೇಳೆ ಪುಣೆ – ಬೆಂಗಳೂರು ರಸ್ತೆಯ ಹುಬ್ಬಳ್ಳಿಯ ಜಿಗಳೂರು ಗ್ರಾಮದ ಹತ್ತಿರ ಬರುತ್ತಿದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಮಸೀದಿಗೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ  ಮೂವರು ಕೊನೆಯುಸಿರೆಳೆದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.   

- Advertisement -

ಸ್ಥಳಕ್ಕೆ ಭೇಟಿ ನೀಡಿದ ಕುಂದಗೋಳ  ಪೊಲೀಸ್ ಸಿಬ್ಬಂದಿ ಗಾಯಾಳುವನ್ನು ರಕ್ಷಣೆ ಮಾಡಿ, ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

Join Whatsapp