ಪಟಾಕಿ ಸಿಡಿಸುವ ಸ್ಪರ್ಧೆ ವೇಳೆ ಸ್ಫೋಟ: ಹಲವರಿಗೆ ಗಾಯ

Prasthutha|

ಭುವನೇಶ್ವರ: ನಗರದ ಹೊರವಲಯದ ಬಲಿಯಾ ಬಜಾರ್’ನಲ್ಲಿ ಪಟಾಕಿ ಸಿಡಿಸುವ ಸ್ಪರ್ಧೆ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

- Advertisement -

ಭುವನೇಶ್ವರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬಲಿಯಾ ಬಜಾರ್’ನಲ್ಲಿರುವ ನಿರ್ಜನ ಸ್ಥಳದಲ್ಲಿ ವಿವಿಧ ಪೂಜಾ ಪಂಡಲ್’ಗಳ ನಡುವೆ ಪಟಾಕಿ ಸಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ವೇಳೆ ಶೇಖರಿಸಿಟ್ಟಿದ್ದ ಪಟಾಕಿಗಳ ರಾಶಿಯ ಮೇಲೆ ಪಟಾಕಿಯ ಕಿಡಿ ಬಿದ್ದವರು ಗಾಯಗೊಂಡಿದ್ದಾರೆ.

- Advertisement -

ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಕಟಕ್’ನ ಎಸ್’ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್’ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಟ್ಟ ರೋಗಿಗಳ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp