ಪೆರಿಯಾರ್ ಜನ್ಮ ದಿನವನ್ನು ಸಾಮಾಜಿಕ ನ್ಯಾಯ ದಿನವಾಗಿ ಆಚರಣೆ: ಮುಖ್ಯಮಂತ್ರಿ ಸ್ಟಾಲಿನ್ ಘೋಷಣೆ

Prasthutha|

ಚೆನ್ನೈ: ಖ್ಯಾತ ಸಮಾಜ ಸುಧಾರಕ, ದಾರ್ಶನಿಕ ಪೆರಿಯಾರ್ ಅವರ ಜನ್ಮ ದಿನವಾದ ಸೆಪ್ಟೆಂಬರ್ 17 ಅನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಣೆ ಮಾಡಲಾಗುವುದೆಂದು ತಮಿಳ್ನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

- Advertisement -

ಸೆಪ್ಟೆಂಬರ್ 17 ರಂದು 1879 ರಲ್ಲಿ ಎ.ವಿ. ರಾಮಸ್ವಾಮಿ ಎಂಬ ತಮಿಳುನಾಡಿನ ಇರೋಡ್ ಎಂಬಲ್ಲಿ ಜನಿಸಿದರು. ಸಮಾಜದೊಂದಿಗೆ ತನ್ನ ಒಡನಾಟ, ಸಾಮಾಜಿಕ ಮೌಢ್ಯತನದ ವಿರುದ್ಧ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಅವರು ನಂತರ ಪೆರಿಯಾರ್ ಎಂದೇ ಖ್ಯಾತರಾಗಿದ್ದರು.

ಈ ಹಿನ್ನೆಲೆಯಲ್ಲಿ ಪೆರಿಯಾರ್ ಅವರ ಜನ್ಮ ದಿನವನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆಯೆಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಿಸಿದರು.



Join Whatsapp