ಗಿನಿಯಲ್ಲಿ ಯೋಧರ ಬಂಡಾಯ, ಗಿನಿ ಅಧ್ಯಕ್ಷರಿಗೆ ಗೃಹ ಬಂಧನ

Prasthutha|

ಗಿನಿ: ಪಶ್ಚಿಮ ಆಫ್ರಿಕಾದ ಗಿನಿ ಗಣರಾಜ್ಯದಲ್ಲಿ ಸೇನೆಯು ಕ್ಷಿಪ್ರ ಕ್ರಾಂತಿ ನಡೆಸಿ 83ರ ಪ್ರಾಯದ ಅಧ್ಯಕ್ಷ ಆಲ್ಫಾ ಕೊಂಡೆಯವರನ್ನು ಬಂಧಿಸಿ ಗೃಹ ಬಂಧನದಲ್ಲಿ ಇರಿಸಿದೆ.

ದೇಶದ ಟೀವಿಯಲ್ಲಿ ಕಾಣಿಸಿಕೊಂಡ ಕರ್ನಲ್ ಮಾಮಾಡಿ ದೌಂಬಯ ಅವರು ಸಂವಿಧಾನ ಅಸಿಂಧುಗೊಂಡಿದೆ. ದೇಶದ ಗಡಿಗಳನ್ನು ಮುಚ್ಚಲಾಗಿದೆ. 1958ರಲ್ಲಿ ದೇಶವು ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆದರೂ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ. ಆರ್ಥಿಕತೆ ನೆಲ ಕಚ್ಚಿದೆ. ದೇಶದ ರಸ್ತೆಗಳು ಎಲ್ಲವೂ ಹಾಳಾಗಿವೆ. ದೇಶ ಕಾಯುವುದು ಯೋಧರ ಕರ್ತವ್ಯ, ಒಬ್ಬ ರಾಜಕಾರಣಿಗೆ ಇಡೀ ದೇಶ ಒಪ್ಪಿಸಲಾಗದು. ಆದ್ದರಿಂದ ಈ ಬಂಡಾಯ ಎಂದರು.

- Advertisement -


ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಇದನ್ನು ಖಂಡಿಸಿ ಬಂದೂಕಿನಿಂದ ಅಧಿಕಾರ ನಿರ್ಬಂಧ ತಪ್ಪು, ಸಂವಿಧಾನವನ್ನು ಸೇನೆ ಅಸಿಂಧುಗೊಳಿಸಲಾಗದು ಎಂದರು.

- Advertisement -