ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆಗೆ ರಾಷ್ಟ್ರೀಯ ಉತ್ಕೃಷ್ಟತಾ ಪುರಸ್ಕಾರ

Prasthutha|

ಬೆಂಗಳೂರು; ವಿಜಯವಾಣಿ ಪತ್ರಿಕೆಯ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಅವರಿಗೆ ಭಾರತೀಯ ಪತ್ರಿಕಾ ಮಂಡಳಿಯ 2020 ನೇ ಸಾಲಿನ ರಾಷ್ಟ್ರೀಯ ಉತ್ಕೃಷ್ಟತಾ ಪುರಸ್ಕಾರ ಲಭಿಸಿದೆ.

- Advertisement -


“ಕರ್ನಾಟಕದಲ್ಲಿ ಹವಾಮಾನ ಆಧಾರಿತ ಹೊಸ ಬೆಳೆ ನೀತಿ” ಕುರಿತ ಬರಹಕ್ಕೆ ಹಣಕಾಸು ವಿಭಾಗದ ವರದಿಗಾರಿಕೆ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಕರ್ನಾಟಕದ ಪತ್ರಕರ್ತರೊಬ್ಬರಿಗೆ ದೊರೆತಿರುವ ಮೊದಲ ಶ್ರೇಷ್ಠ ಪ್ರಶಸ್ತಿ ಇದಾಗಿದೆ.


ಫೆಬ್ರವರಿ 27 ರಂದು ದೆಹಲಿಯ ರಫಿ ಮಾರ್ಗನಲ್ಲಿರುವ ಕಾನ್ ಸ್ಟಿಟೂಷನ್ ಕ್ಲಬ್’ನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪತ್ರಿಕಾ ಮಂಡಳಿ ಅಧ್ಯಕ್ಷ ಜಸ್ಟೀಸ್ ರಂಜನಾ ಪ್ರಕಾಶ್ ದೇಸಾಯಿ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp