ಅದಾನಿ ಅಕ್ರಮದ ತನಿಖೆಗೆ ಒತ್ತಾಯ: ಸಂಸತ್ ಕಲಾಪಗಳು ಯಥಾವತ್ ಮುಂದೂಡಿಕೆ

Prasthutha|

ನವದೆಹಲಿ: ಸಂಸತ್’ನ ಉಭಯ ಸದನಗಳಲ್ಲೂ ಮಂಗಳವಾರ ಕೂಡ ಅದಾನಿ ಅವ್ಯವಹಾರದ ಚರ್ಚೆಗೆ ವಿಪಕ್ಷಗಳು ಆಗ್ರಹಿಸಿದಾಗ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲ, ಕೋಲಾಹಲ ಉಂಟಾದುದರಿಂದ ಕಲಾಪವನ್ನು ಮುಂದೂಡಲಾಯಿತು.

- Advertisement -


ಇಂದೂ ಪ್ರತಿ ಪಕ್ಷಗಳ ಸಂಸದರು ಅದಾನಿ ಗುಂಪಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಲು ಒತ್ತಾಯಿಸಿದವು. ಇದರ ನಡುವೆ ರಾಜ್ಯಸಭೆಯಲ್ಲಿ ಟರ್ಕಿ, ಸಿರಿಯಾದಲ್ಲಿ ನಡೆದ ಭೂಕಂಪದಲ್ಲಿ ಮಡಿದವರಿಗಾಗಿ ಮೌನ ಪ್ರಾರ್ಥನೆ ನಡೆಯಿತು.
“ನಾವು ಟರ್ಕಿ ಮತ್ತು ಸಿರಿಯಾ ಸರಕಾರಗಳೊಂದಿಗೆ ಈ ಭೂಕಂಪ ನಷ್ಟದ ಸಂಕಷ್ಟದ ಕಾಲದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತೇವೆ” ಎಂದು ರಾಜ್ಯ ಸಭೆಯಲ್ಲಿ ಚೇರ್ಮನ್ ಮತ್ತು ಉಪರಾಷ್ಟ್ರಪತಿ ಜಗದೀಪ್ ದನ್ಕರ್ ಹೇಳಿದರು.


ಮಂಗಳವಾರ ಬೆಳಿಗ್ಗೆ ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಪಕ್ಷದ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಇಂದಿನಿಂದ ಸಂಸತ್ ಕಲಾಪಗಳಲ್ಲಿ ವಿರೋಧ ಪಕ್ಷಗಳವರು ಹೆಚ್ಚೆಚ್ಚು ಭಾಗವಹಿಸುವರು ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷವು ಎರಡೂ ಸದನಗಳ ಸುಗಮ ಕಲಾಪ ನಡೆಸಬೇಕು ಎಂದು ಬಯಸುತ್ತದೆ. ಆದರೆ ಬಿಜೆಪಿಯು ಜಂಟಿ ಸಂಸದೀಯ ಸಮಿತಿಯ ತನಿಖೆ ಮೊದಲಾದವಕ್ಕೆ ಹೆದರಿರುವುದರಿಂದ ಏನಾದರೂ ಪ್ರಶ್ನಿಸಿದ ಕೂಡಲೆ ಸಂಸತ್ ಕಲಾಪ ಮುಂದೂಡಿ ಓಡಿ ಹೋಗುತ್ತದೆ ಎಂದೂ ಜೈರಾಂ ರಮೇಶ್ ಹೇಳಿದರು.
ಮಂಗಳವಾರ ಬೆಳಿಗ್ಗೆ ಬಿಜೆಪಿಯು ವಾರದ ಸಂಸದೀಯ ಪಕ್ಷದ ಸಭೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಬಿಜೆಪಿಯ ಅಧ್ಯಕ್ಷರಾದ ಜೆ. ಪಿ. ನಡ್ಡಾ ಅವರು 2023- 24ರ ಬಜೆಟ್ ಗಾಗಿ ಪ್ರಧಾನಿ ಮೋದಿ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

- Advertisement -


ನನ್ನ ಸರಕಾರದ ಎಲ್ಲ ಬಜೆಟ್ ಗಳು ಬಡವರ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಲ್ಪಟ್ಟಿವೆ ಎಂದರು. “ಈ ಬಾರಿಯ ಬಜೆಟ್ಟನ್ನೂ ಯಾರೊಬ್ಬರೂ ಚುನಾವಣಾ ಬಜೆಟ್ ಎಂದು ಕರೆದಿಲ್ಲ! ಮುಂದಿನ ಲೋಕ ಸಭೆಗೆ ಮೊದಲಿನ ಕೊನೆಯ ಸಂಪೂರ್ಣ ಬಜೆಟ್ ಇದಾದರೂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿಲ್ಲ” ಎಂದು ಪ್ರಧಾನಿ ಹೇಳಿದರು.

Join Whatsapp