ಮಂಗಳೂರು: ಹಾಸ್ಟೆಲ್’ನಲ್ಲಿ ವಿಷಾಹಾರ ಸೇವನೆ: ಪ್ರಕರಣ ದಾಖಲು

Prasthutha|

ಮಂಗಳೂರು: ನಗರದ ಶಕ್ತಿನಗರದ ಖಾಸಗಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್’ನಲ್ಲಿ ವಿಷಾಹಾರ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಅವರು ನರ್ಸಿಂಗ್ ಕಾಲೇಜು ಮತ್ತು ಆಡಳಿತ ಮಂಡಳಿ ವಿರುದ್ದ ನಿರ್ಲಕ್ಷ್ಯತೆಯ ಕುರಿತು ದೂರು ನೀಡಿದ್ದು ಅದರಂತೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.


ಹಾಸ್ಟೆಲ್ ನಲ್ಲಿ ಆಹಾರ ಸೇವಿಸಿದ್ದ ಕೆಲವು ವಿದ್ಯಾರ್ಥಿಗಳಲ್ಲಿ ಭಾನುವಾರವೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಸೋಮವಾರ ಮಧ್ಯಾಹ್ನ ಹಾಸ್ಟೆಲ್ ನ ಬಹುತೇಕ ವಿದ್ಯಾರ್ಥಿಗಳು ವಾಂತಿ, ತಲೆಸುತ್ತುವಿಕೆಯಿಂದ ಅಸ್ವಸ್ಥಗೊಂಡಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Join Whatsapp