ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಸಮಿತಿ, ಬ್ಲಾಕ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

Prasthutha|

ಬಂಟ್ವಾಳ: ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಮತ್ತು ಬ್ಲಾಕ್ ನ ನೂತನ ಪದಾಧಿಕಾರಿಗಗಳನ್ನು ಆಯ್ಕೆ ಮಾಡಲಾಯಿತು.

- Advertisement -

ಬಂಟ್ವಾಳ ತಾಲೂಕಿನ ಎಸ್.ಎಸ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ 2018-21 ನೇ ಸಾಲಿನ ಕಳೆದ ಅವಧಿಯ ವರದಿಯನ್ನು ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ಮಂಡಿಸಲಾಯಿತು.
ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ ಧ್ವಜಾರೋಹಣ ಮಾಡುವ ಮೂಲಕ ಸಭೆಯನ್ನು ಉದ್ಘಾಟನೆ ಮಾಡಿದರು.

ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ ಕಳೆದ ಮೂರು ವರ್ಷದ ಪಕ್ಷದ ವರದಿಯನ್ನು ಮಂಡಿಸಿದರು
ಬಳಿಕ 2021-24 ನೇ ಸಾಲಿಗೆ ಕ್ಷೇತ್ರ ಸಮಿತಿ ಮತ್ತು ಬ್ಲಾಕ್ ಗೆ ನೂತನ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.

- Advertisement -

ಅಧ್ಯಕ್ಷರಾಗಿ ಶಾಹುಲ್ ಹಮೀದ್ ಎಸ್.ಎಚ್ , ಉಪಾಧ್ಯಕ್ಷರಾಗಿ ಖಲಂದರ್ ಪರ್ತಿಪ್ಪಾಡಿ, ಕಾರ್ಯದರ್ಶಿಯಾಗಿ ಮುನೀಶ್ ಆಲಿ ಬಂಟ್ವಾಳ, ಜೊತೆ ಕಾರ್ಯದರ್ಶಿಗಳಾಗಿ ಮುಬಾರಕ್ ಗೂಡಿನ ಬಳಿ ಮತ್ತು ಹಮೀದ್ ಆಲಿ ಕಲ್ಲಡ್ಕ, ಕೋಶಾಧಿಕಾರಿಯಾಗಿ ಫೈಝಲ್ ಮಂಚಿ ಮತ್ತು ಸದಸ್ಯರಾಗಿ ಯೂಸುಫ್ ಆಲಡ್ಕ, ಅಕ್ಬರ್ ಅಲಿ ಪೊನ್ನೋಡಿ, ಇಕ್ಬಾಲ್ ನಂದರಬೆಟ್ಟು, ಮಲಿಕ್ ಕೊಳಕೆ, ಸಲೀಂ ಆಲಾಡಿ, ಅನ್ವರ್ ಬಡಕಬೈಲ್ ಮತ್ತು ಮಜೀದ್ ಆಲಡ್ಕರವರವರನ್ನು ಆಯ್ಕೆ ಮಾಡಲಾಯಿತು

ಬ್ಲಾಕ್ ಮಟ್ಟದ ಕೊಳ್ನಾಡು ಬ್ಲಾಕ್ ಗೆ ಅಧ್ಯಕ್ಷರಾಗಿ ಬಶೀರ್ ಕೊಳ್ನಾಡ್ ಕಾರ್ಯದರ್ಶಿಯಾಗಿ ಹೈದರ್ ಆಲಿ ಕಡಂಬು, ಕಲ್ಲಡ್ಕ ಬ್ಲಾಕ್ ಗೆ ಅಧ್ಯಕ್ಷರಾಗಿ ಸತ್ತಾರ್ ಕಲ್ಲಡ್ಕ ಕಾರ್ಯದರ್ಶಿಯಾಗಿ ಫಾರೂಕ್ ಆಲಾಡಿ, ಸಂಗಬೆಟ್ಟು ಬ್ಲಾಕ್ ಗೆ ಅಧ್ಯಕ್ಷರಾಗಿ ಸುಲೈಮಾನ್ ಉಸ್ತಾದ್ ಕಾರ್ಯದರ್ಶಿಯಾಗಿ ಅಶ್ರಫ್ ಮೂಲರಪಟ್ನ, ಸರಪಾಡಿ ಬ್ಲಾಕ್ ಗೆ ಅಧ್ಯಕ್ಷರಾಗಿ ಬದ್ರುದ್ದೀನ್ ಅಗ್ರಹಾರ ಕಾರ್ಯದರ್ಶಿಯಾಗಿ ಮುಸ್ತಫಾ ಕಾವಲಕಟ್ಟೆ, ಹಾಗು ಬಂಟ್ವಾಳ ಪುರಸಭಾ ಸಮಿತಿಗೆ ಅಧ್ಯಕ್ಷರಾಗಿ ಶರೀಫ್ ವಳವೂರು ಮತ್ತು ಕಾರ್ಯದರ್ಶಿಯಾಗಿ ಇಕ್ಬಾಲ್ ಮೈನ್ಸ್ ರವರನ್ನು ಆಯ್ಕೆ ಮಾಡಲಾಯಿತು

ಚುನಾವಣಾಧಿಕಾರಿಗಳಾಗಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಸಹಾಯಕರಾಗಿ ಜಮಾಲ್ ಜೋಕಟ್ಟೆ, ನೂರುಲ್ಲಾ ಕುಳಾಯಿ, ಶೆರೀಫ್ ಪಾಂಡೇಶ್ವರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

Join Whatsapp