ರೈತರ ಪ್ರತಿಭಟನೆ| ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ನಾಲ್ಕು ರಾಜ್ಯಗಳಿಗೆ ನೋಟಿಸ್

Prasthutha|

ಹೊಸದಿಲ್ಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ನಾಲ್ಕು ರಾಜ್ಯಗಳಿಗೆ ನೋಟಿಸ್ ನೀಡಿದೆ.

- Advertisement -

ಸಿಂಗು, ಸಿಕ್ರಿ ಮತ್ತು ಗಾಝಿಪುರದ ಗಡಿಗಳಲ್ಲಿ ನಡೆಯುತ್ತಿರುವ ರೈತರ ಮುಷ್ಕರವು ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗ ಈ ನಿರ್ಧಾಕ್ಕೆ ಬಂದಿದೆ.

ಪ್ರತಿಭಟನಾ ಸ್ಥಳಗಳಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆಯಾಗಿರುವ ಬಗ್ಗೆ ದೂರು ಬಂದಿರುವ ಬಗ್ಗೆ ಮಾನವ ಹಕ್ಕುಗಳ ಆಯೋಗ ನೋಟೀಸಿನಲ್ಲಿ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ರಾಜಸ್ಥಾನ ಸರ್ಕಾರಗಳಿಂದ ವರದಿ ಕೇಳಲಾಗಿದೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.

- Advertisement -

ಕಳೆದ ವರ್ಷ ನವೆಂಬರ್ 26 ರಂದು ದೆಹಲಿಯಲ್ಲಿ ಗಡಿಯನ್ನು ನಿರ್ಬಂಧಿಸುವ ಮೂಲಕ ರೈತರು ಮುಷ್ಕರವನ್ನು ಆರಂಭಿಸಿದ್ದರು. ಸಿಂಗು ಸೇರಿದಂತೆ ಮುಖ್ಯ ರಸ್ತೆಯ ದಿಗ್ಬಂಧನವು ದೇಶದ ರಾಜಧಾನಿಗೆ ಮತ್ತು ಹೊರಗಿನ ಸಂಚಾರದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ದೂರು ನೀಡಲಾಗಿತ್ತು.

ಸಿಂಗು ಗಡಿಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 9,000 ಸಣ್ಣ ಉದ್ಯಮಗಳ ಮೇಲೆ ಮುಷ್ಕರ ಪರಿಣಾಮ ಬೀರಿದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ನೋಟೀಸಿನಲ್ಲಿ ತಿಳಿಸಿದೆ.

Join Whatsapp