ಝೊಮ್ಯಾಟೋ ಸಹ-ಸಂಸ್ಥಾಪಕ ಗೌರವ್ ಗುಪ್ತಾ ತಮ್ಮ ಸ್ಥಾನಕ್ಕೆ ರಾಜೀನಾಮೆ

Prasthutha|

ನವದೆಹಲಿ: ಭಾರತದ ಪ್ರಮುಖ ಫುಡ್ ಡೆಲಿವರಿ ಕಂಪನಿಯಾದ ಝೊಮ್ಯಾಟೋದ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗೌರವ್ ಗುಪ್ತ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಆಹಾರ ವಿತರಣಾ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿ ಝೊಮ್ಯಾಟೋ ಸಂಸ್ಥೆಯನ್ನು ಮುನ್ನಡೆಸಿದ ಸಹ-ಸಂಸ್ಥಾಪಕರಾದ ಗೌರವ್ ಗುಪ್ತಾ ಅವರು ‘ಹೊಸ ಅಧ್ಯಾಯವನ್ನು ಪ್ರಾರಂಭಿಸಲು’ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿದ ಅವರು, ನಾನು ನನ್ನ ಜೀವನದಲ್ಲಿ ಹೊಸ ತಿರುವು ಪಡೆಯುತ್ತಿದ್ದೇನೆ ಮತ್ತು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ಝೊಮ್ಯಾಟೋದಲ್ಲಿ ಕಳೆದ 6 ವರ್ಷಗಳ ನನ್ನ ಪ್ರಯಾಣದಲ್ಲಿ ಈಗ ನಾನು ಪರ್ಯಾಯ ಮಾರ್ಗ ತೆಗೆದುಕೊಳ್ಳುತ್ತಿದ್ದೇನೆ. ನಾನು ಇದನ್ನು ಬರೆಯುವಾಗ ತುಂಬಾ ಭಾವುಕನಾಗಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

- Advertisement -