ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಆಗಸ್ಟ್ 12ರಿಂದ 25ರವರೆಗೆ ಪರೀಕ್ಷೆ

Prasthutha|

ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಪ್ರಕಟಿಸಲಾಗಿದ್ದು, ಆಗಸ್ಟ್ 12ರಿಂದ 25ರವರೆಗೆ ನಡೆಯಲಿದೆ. ಬೆಳಗ್ಗೆ 10.15ರಿಂದ 1.30ರವರೆಗೆ ಹಾಗೂ ಮಧ್ಯಾಹ್ನ 2.15ರಿಂದ 5.30ರವೆಗೆ ಪರೀಕ್ಷೆ ನಡೆಯಲಿದೆ.

- Advertisement -

12ರಂದು ಕನ್ನಡ, ಅರಬಿಕ್, 13ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ, 16ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತಿ, ಫ್ರೆಂಟ್, 17ರಂದು ಐಚ್ಛಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ ಗಣಿತ, 18ರಂದು ಲೆಕ್ಕಶಾಸ್ತ್ರ,ಭೂಗರ್ಭಶಾಸ್ತ್ರ , ಶಿಕ್ಷಣಶಾಸ್ತ್ರ, ಗೃಹ ವಿಜ್ಞಾನ, 19ರಂದು ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ, 20ರಂದು ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ ಪರೀಕ್ಷೆಗಳು ನಡೆಯಲಿವೆ.

22ರಂದು ಇಂಗ್ಲಿಷ್, ಮಧ್ಯಾಹ್ನ 2.15ರಿಂದ ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್, 23ರಂದು ಅರ್ಥಶಾಸ್ತ್ರ,ಜೀವಶಾಸ್ತ್ರ, 24ರಂದು ಇತಿಹಾಸ, ಸಂಖ್ಯಾಶಾಸ್ತ್ರ, 25ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

Join Whatsapp