ಇಂಧನ ಬೆಲೆ ಏರಿಕೆ ನಿಯಂತ್ರಣಕ್ಕೆ ಆಗ್ರಹಿಸಿ ಎಸ್ ಡಿಟಿಯು ಪ್ರತಿಭಟನೆ

Prasthutha|

ಮಂಗಳೂರು: ಪೆಟ್ರೋಲ್, ಡೀಸೆಲ್, ಆಟೋ ಎಲ್ ಪಿಜಿ ಬೆಲೆ ಏರಿಕೆಯನ್ನು ಖಂಡಿಸಿ ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಬೇಕೆಂದು ಆಗ್ರಹಿಸಿ ಎಸ್ ಡಿಟಿಯು ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಝಕೀರ್ ಉಳ್ಳಾಲ್ ಕೋವಿಡ್, ಒಮಿಕ್ರಾನ್ ಪೆಂಡಮಿಕ್ ಬಿಕ್ಕಟ್ಟಿನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡ ಮಧ್ಯಮ, ದುಡಿಯುವ ವರ್ಗಕ್ಕೆ ಪೆಟ್ರೋಲ್ ಡೀಸೆಲ್ ಆಟೋ ಎಲ್ ಪಿಜಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಸರಕಾರ ವಿವಿಧ ರೀತಿಯಲ್ಲಿ ಷಡ್ಯಂತ್ರಗಳಿಂದ ಜನರ ದಿಕ್ಕು ತಪ್ಪಿಸುತ್ತದೆ ಎಂದು ಆರೋಪಿಸಿದರು. ಸರಕಾರ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುವುದನ್ನು ನಿಲ್ಲಿಸಿ ಜನ ಹಿತಕ್ಕಾಗಿ ಕರ್ಯನಿರ್ವಹಿಸಬೇಕಾಗಿದೆ ಎಂದು ಆಗ್ರಹಿಸಿದರು.

ಎಸ್ ಡಿಟಿಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಮಾತನಾಡಿ, ಇಂಧನ ಬೆಲೆ ಏರಿಕೆಯಿಂದ ಕೇವಲ ವಾಹನ ಚಾಲಕರಿಗೆ ಮಾತ್ರ ಸಂಕಷ್ಟ ಅಲ್ಲ, ಸಾಗಾಟ ವೆಚ್ಚ ಹೆಚ್ಚಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಕೂಡ ದುಪ್ಪಟ್ಟಾಗಿದೆ. ಹಾಗಾಗಿ ಬಡ ಮಧ್ಯಮ ಶ್ರಮಿಕ ವರ್ಗಕ್ಕೆ ನೇರ ಹೊರೆಯಾಗಿ ಪರಿಣಮಿಸಿದೆ ಹಾಗಾಗಿ ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಬೇಕೆಂದು ಒತ್ತಾಯಿಸಿದರು

- Advertisement -

ಪ್ರತಿಭಟನೆಯ ನೇತೃತ್ವವನ್ನು ಎಸ್ ಡಿಟಿಯು ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷ ಅರ್ಷದ್ ಕುದ್ರೋಳಿ ವಹಿಸಿದರು, ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್, ಜಿಲ್ಲಾ ಸಮಿತಿ ಸದಸ್ಯ ನೌಫಲ್ ಕುದ್ರೋಳಿ, ಕಾರ್ಯದರ್ಶಿ ಶರೀಫ್ ಕುತ್ತಾರ್, ಮಜೀದ್ ಉಳ್ಳಾಲ, ಇಲ್ಯಾಸ್ ಬೆಂಗರೆ, ಸಿಕಂದರ್, ಶೆರೀಫ್ ಪಕಲಡ್ಕ, ಇಬ್ರಾಹಿಂ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು

ಮುಸ್ತಫಾ ಪರ್ಲಿಯಾ ಸ್ವಾಗತಿಸಿ ನಿರೂಪಿಸಿದರು ಪ್ರತಿಭಟನಕಾರರು ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗಿದರು.

Join Whatsapp