ಕೊರಗ ಸಮಾಜದವರ ಮೆಹಂದಿ ಕಾರ್ಯಕ್ರಮದ ವೇಳೆ ಪೊಲೀಸರಿಂದ ಅಮಾನವೀಯ ಲಾಠಿ ಚಾರ್ಜ್: SDPI ಖಂಡನೆ

Prasthutha|

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕೋಟತಟ್ಟುವಿನ ದಲಿತರ ಕಾಲೋನಿಯಲ್ಲಿ ಕೊರಗ ಸಮಾಜದವರ ಮೆಹಂದಿ ಕಾರ್ಯಕ್ರಮದಲ್ಲಿ ರಾತ್ರಿವರೆಗೂ ಡಿ ಜೆ ಹಾಕಿದ್ದಾರೆ ಎಂಬ ನೆಪವನ್ನು ಇಟ್ಟುಕೊಂಡು ಪೊಲೀಸರು ಏಕಾಏಕಿ ದಾಳಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯರು, ಮಕ್ಕಳು ಅಂತ ನೋಡದೆ ಲಾಠಿಚಾರ್ಜ್ ಮಾಡಿ ಮೂವರು ಗಾಯ ಗೊಳ್ಳುವಂತೆ ಮಾಡಿದ ಘಟನೆಯನ್ನು SDPI ಉಡುಪಿ ಜಿಲ್ಲಾ ಸಮಿತಿ ತೀವ್ರವಾಗ ಖಂಡಿಸಿದೆ.

- Advertisement -


ಒಂದು ವೇಳೆ ಆ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ, ಅಥವಾ ಸಾರ್ವಜನಿಕರಿಂದ ದೂರು ಬಂದಿದ್ದರೆ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದಿತ್ತು. ಅದು ಬಿಟ್ಟು ಮಹಿಳಾ ಪೊಲೀಸರ ಅನುಪಸ್ಥತಿಯಲ್ಲಿ ಮನೆಗೆ ಪ್ರವೇಶಿಸಿ ಮಹಿಳೆಯರ ಮೇಲೂ ಲಾಠಿ ಬೀಸಿರುವುದು ಅಧಿಕಾರದ ದುರುಪಯೋಗವಾಗಿದೆ.

ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕೋಟ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಎಸ್ ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಉಮಾನಾಥ್ ಪಡುಬಿದ್ರೆ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Join Whatsapp