ವಿಧಾನ ಸೌಧ ಮುತ್ತಿಗೆ, ಹೋರಾಟಕ್ಕೆ ಸಂಪೂರ್ಣ ಬೆಂಬಲ | ಎಸ್.ಡಿ.ಪಿ.ಐ

Prasthutha|

ಬೆಂಗಳೂರು : ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಈಗಾಗಲೇ ರಾಷ್ಟ್ರದಾದ್ಯಂತ ರೈತರು ನಿರಂತರ ಹೋರಾಟಗಳನ್ನು ನಡೆಸುತ್ತಿದ್ದರೂ ಬಿ.ಜೆ.ಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾತ್ರ ರೈತರ ಮನವಿಗೆ ಸ್ಪಂದಿಸದಿರುವುದು ಅತ್ಯಂತ ಖಂಡನೀಯ ಎಂದು ಎಸ್.ಡಿ.ಪಿ.ಐ ಹೇಳಿದೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಾರಂಭದಿಂದಲೂ ರೈತ ಪರವಾಗಿದ್ದು, ಸದರಿ ವಿಷಯದಲ್ಲಿ ರೈತರು ನಡೆಸಿದ ಎಲ್ಲಾ ಹೋರಾಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದೆ. ಅಲ್ಲದೇ ಜಾಗೋ ಕಿಸಾನ್ ಎಂಬ ಶೀರ್ಷಿಕೆಯಡಿಯಲ್ಲಿ ಹಳ್ಳಿ ಹಳ್ಳಿಗಳಿಗೆ ತೆರಳಿ ರೈತ ವಿರೋಧಿ ಮಸೂದೆಗಳ ಕುರಿತು ಜನ ಜಾಗೃತಿ ಮೂಡಿಸಿದೆ ಎಂದು ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.

- Advertisement -

ರೈತ ವಿರೋಧಿ ಮಸೂದೆಗಳನ್ನು ಯಾವ ಕಾರಣಕ್ಕೂ ರಾಜ್ಯದಲ್ಲಿ ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿ ಇದೇ ಸೆಪ್ಟೆಂಬರ್ 13 ನೇ ತಾರೀಖು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಯಲಿರುವ ವಿಧಾನ ಸೌಧ ಮುತ್ತಿಗೆ ಹೋರಾಟಕ್ಕೂ ಎಸ್.ಡಿ.ಪಿ.ಐ ತನ್ನ ಬೆಂಬಲ ನೀಡಲಿದೆ ಎಂದು ಅಬ್ದುಲ್ ಹನ್ನಾನ್ ಘೋಷಿಸಿದ್ದಾರೆ.

- Advertisement -