ಅಭಿವೃದ್ಧಿಗೆ ಬಿಡುಗಡೆಯಾದ ಹಣ 40% ನುಂಗಿದ ಮೇಲೆ ಕಪೋಲಕಲ್ಪಿತ ಲವ್ ಜಿಹಾದ್ ನಾಟಕ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ಅಭಿವೃದ್ಧಿಗೆ ಬಿಡುಗಡೆಯಾದ ಹಣ 40% ನುಂಗಿದ ಮೇಲೆ ಕಪೋಲಕಲ್ಪಿತ ಲವ್ ಜಿಹಾದ್ ನಾಟಕದ ಮಾತೇ ಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಇದರ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಕಿಡಿಕಾರಿದ್ದಾರೆ.

- Advertisement -

ಅಭಿವೃದ್ಧಿಯ ಬಗ್ಗೆ ಮಾತನಾಡಬೇಡಿ. ನಿಮ್ಮ ಮಕ್ಕಳನ್ನು ಲವ್ ಜಿಹಾದ್ ನಿಂದ ರಕ್ಷಿಸಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ ಮಜೀದ್, ಅಭಿವೃದ್ಧಿಗೆ ಬಿಡುಗಡೆಯಾದ ಹಣ 40% ನುಂಗಿದ ಮೇಲೆ ಕಪೋಲಕಲ್ಪಿತ ಲವ್ ಜಿಹಾದ್ ನಾಟಕದ ಮಾತೇ ಬೇಕು ಅಲ್ಲವೇ? ಎಂದು ಕೇಳಿದ್ದಾರೆ.

ನಳಿನ್ ಕುಮಾರ್ ಅವರೇ, ನಿಮಗೆ ಮತ್ತು ನಿಮ್ಮಪಕ್ಷಕ್ಕೆ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ ಎಂದು ನೇರವಾಗಿ ಹೇಳಿ. ರಸ್ತೆ, ಚರಂಡಿ ಮುಖ್ಯ ಅಲ್ಲ ಎಂದು ಹೇಳಿದ್ದೀರಿ. ಹೇಳದೆ ಏನು ಮಾಡ್ತೀರಿ? ಅದಕ್ಕಾಗಿ ಬಿಡುಗಡೆಯಾದ ಹಣ 40% ನುಂಗಿದ ಮೇಲೆ ಕಪೋಲಕಲ್ಪಿತ ಲವ್ ಜಿಹಾದ್ ನಾಟಕದ ಮಾತೇ ಬೇಕು ಅಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.

Join Whatsapp