ಮಂಗಳೂರು: ಅಪರಾಧ ಪತ್ತೆದಳದ ಶ್ವಾನ ‘ಜ್ವಾಲಾ’ ಇನ್ನಿಲ್ಲ

Prasthutha|

ಮಂಗಳೂರು: ದ.ಕ. ಜಿಲ್ಲಾ ಪೊಲೀಸ್‌ ನ ಅಪರಾಧ ಪತ್ತೆದಳ ವಿಭಾಗದ ಶ್ವಾನದಳದ “ಜ್ವಾಲಾ’ ಎಂಬ ಹೆಸರಿನ ಶ್ವಾನ ಮಂಗಳವಾರ ಮೃತಪಟ್ಟಿದೆ.

- Advertisement -

ಡಾಬರ್‌ಮನ್ ಪಿಂಚರ್ ತಳಿಗೆ ಸೇರಿದ ಜ್ವಾಲಾ ದಕ್ಷಿಣ ಕನ್ನಡ ಜಿಲ್ಲಾ ಶ್ವಾನ ದಳದಲ್ಲಿ ಅಪರಾಧ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಹಾಯ ಮಾಡುತ್ತಿತ್ತು. ಕಳೆದ ಕೆಲವು ಸಮಯಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜ್ವಾಲಾ ಇಂದು ಬೆಳಿಗ್ಗೆ ಸಾವನ್ನಪ್ಪಿದೆ.

ಮೃತ ಶ್ವಾನಕ್ಕೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜ್ವಾಲಾಳನ್ನು ಸಿಬಂದಿ ಕುಮಾರ ಕತ್ಲೇರ ನಿರ್ವಹಿಸುತ್ತಿದ್ದರು.

- Advertisement -

ಕಿಡ್ನಿ ಸಮಸ್ಯೆಯಿಂದಾಗಿ ‘ಜ್ವಾಲಾ’ ಮೃತಪಟ್ಟಿದೆ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಭಗವಾನ್‌ ಸೊನಾವಣೆ ತಿಳಿಸಿದ್ದಾರೆ.

Join Whatsapp