ಕಲ್ಲಿಕೋಟೆ: ಕೇರಳದ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ 100 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಮತ ಎಣಿಕೆ ಮುಂದುವರಿದಿದೆ.
ಕಾಸರಗೋಡಿನಲ್ಲಿ 8 ಸ್ಥಾನ, ಕಣ್ಣೂರಿನಲ್ಲಿ 13, ಕಲ್ಲಿಕೋಟೆಯಲ್ಲಿ 4, ಮಲಪ್ಪುರಂನಲ್ಲಿ 8, ಪಾಲಕ್ಕಾಡ್ ನಲ್ಲಿ 7, ತ್ರಿಶೂರ್ ನಲ್ಲಿ 5, ಎರ್ಣಾಕುಳಂನಲ್ಲಿ 5, ಇಡುಕ್ಕಿಯಲ್ಲಿ 1, ಕೋಟ್ಟಯಂ ನಲ್ಲಿ 10, ಆಲಪ್ಪುಝದಲ್ಲಿ 13, ಪತ್ತನಂತಿಟ್ಟದಲ್ಲಿ 6, ಕೊಲ್ಲಂ ನಲ್ಲಿ 10, ತಿರುವಣಂತಪುರದಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿದೆ.
2010ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ 11 ಸೀಟುಗಳನ್ನಷ್ಟೇ ಪಡೆದಿದ್ದ ಎಸ್.ಡಿ.ಪಿ.ಐ 2015ರಲ್ಲಿ 48 ಸ್ಥಾನಗಳನ್ನು ಗೆದ್ದಿತ್ತು. ಇದೀಗ 86 ಸೀಟುಗಳನ್ನು ಗೆದ್ದುಕೊಂಡು ತನ್ನ ಬಲವನ್ನು ವೃದ್ಧಿಸಿಕೊಂಡಿದೆ.
ಕೇರಳದ 941 ಗ್ರಾಮ ಪಂಚಾಯಿತಿಗಳು, 152 ಬ್ಲಾಕ್ ಪಂಚಾಯಿತಿಗಳು, 14 ಜಿಲ್ಲಾ ಪಂಚಾಯಿತಿಗಳು, 86 ಪುರಸಭೆಗಳು ಮತ್ತು ಆರು ನಿಗಮಗಳ ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆಸಲಾಗುತ್ತಿದೆ.