ವಿಧಾನಪರಿಷತ್ ನಲ್ಲಿ ಸಭಾಪತಿಯವರನ್ನು ಎಳೆದಾಡಿದ ಘಟನೆ | ಮೂರೂ ಪಕ್ಷಗಳೂ ಕಾರಣ : ಕೋಟ ಶ್ರೀನಿವಾಸ ಪೂಜಾರಿ

Prasthutha|

ಮೈಸೂರು : ವಿಧಾನಪರಿಷತ್ ನಲ್ಲಿ ನಿನ್ನೆ ನಡೆದ ಘಟನೆಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳೂ ಕಾರಣ ಎಂದು ಸಚಿವ, ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಜಾಪ್ರಭುತ್ವದ ದೇವಾಲಯದಲ್ಲಿ ನಿನ್ನೆ ನಡೆದ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

- Advertisement -

ಈ ಹಿಂದೆ ಡಿ.ಎಚ್. ಶಂಕರಮೂರ್ತಿ ಸಭಾಪತಿಗಳಾಗಿದ್ದಾಗ ಕಾಂಗ್ರೆಸ್ ನವರು ಅವಿಶ್ವಾಸ ಮತಕ್ಕೆ ಹಾಕಿದ್ದರು. ಈಗಲೂ ಅಂತಹುದಕ್ಕೆ ಅವಕಾಶ ನೀಡಬಹುದಿತ್ತು. ಆದರೆ, ಕಾಂಗ್ರೆಸ್ ನವರು ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.  

ಸಭಾಪತಿ ಹುದ್ದೆಯನ್ನು ಯಾವುದೇ ಪಕ್ಷ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಈ ಪ್ರಕರಣ ಸುಖಾಂತ್ಯವಾಗುವ ವಿಶ್ವಾಸವಿದೆ. ಸದನದ ಬಗ್ಗೆ ಹೆಚ್ಚು ಮಾತನಾಡಿದರೆ ಅದಕ್ಕೆ ಅಗೌರವ ಮಾಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -