ಹಾವೇರಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ಭಾರತ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಕ್ಷವಾಗಿದ್ದು, ಇದರ ನಿಷೇಧದ ಬಗ್ಗೆ ಯಾವುದೇ ನಿರ್ಧಾರ ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹಾವೇರಿಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಡಿಪಿಐ ನಿಷೇಧದ ಬಗ್ಗೆ ಬರುವ ದಿನಗಳ ಬೆಳವಣಿಗೆಯ ಆಧಾರದ ಮೇಲೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ಪಿ.ಎಫ್.ಐ ನಿಷೇಧ ರಾಜಕೀಯ ಸ್ಟಂಟ್ ಹಾಗೂ ಚುನಾವಣಾ ಗಿಮಿಕ್ ಎಂದಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಬೇರೇನೂ ವ್ಯಾಖ್ಯಾನ ಮಾಡಲು ಸಾಧ್ಯ. ಇಷ್ಟು ವರ್ಷ ವಿಧ್ವಂಸಕ ಕೃತ್ಯಗಳು ನಮ್ಮೆದುರಿಗೆ ನಡೆದಿದೆ. ಕೊಲೆ, ಭಯೋತ್ಪಾದನೆ ಚಟುವಟಿಗೆ ಬೆಂಬಲ ನೀಡಿದ್ದಾರೆ. ಇದೆ ಕಾಂಗ್ರೆಸ್ ವಿಧಾನ ಸಭೆ ಒಳಹೊರಗೆ ನಿಷೇಧಿಸಿ ಅಂತ ಹೇಳುತ್ತಿದ್ದವರು, ಈಗ ಗಿಮಿಕ್ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹರಿಪ್ರಸಾದ್ ಯೋಚಿಸಬೇಕು ತಿರುಗೇಟು ನೀಡಿದರು.